ADVERTISEMENT

ಮಹಾ ವಿಕಾಸ ಅಘಾಡಿ ಕಡು ಭ್ರಷ್ಟ ಸರ್ಕಾರ: ಫಡಣವೀಸ್ ವಾಗ್ದಾಳಿ

ನವದೆಹಲಿ (ಪಿಟಿಐ):
Published 16 ಅಕ್ಟೋಬರ್ 2021, 10:10 IST
Last Updated 16 ಅಕ್ಟೋಬರ್ 2021, 10:10 IST
ದೇವೇಂದ್ರ ಫಡಣವೀಸ್
ದೇವೇಂದ್ರ ಫಡಣವೀಸ್   

ನಾಗಪುರ: ‘ಶಿವಸೇನಾ ನೇತೃತ್ವದ ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರವು ಮಹಾರಾಷ್ಟ್ರದ ಇತಿಹಾಸದಲ್ಲೇ ಅತ್ಯಂತ ಕಡು ಭ್ರಷ್ಟ ಸರ್ಕಾರ. ಸುಲಿಗೆಯನ್ನೇ ಕಾರ್ಯಸೂಚಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸುತ್ತಿದೆ’ ಎಂದು ಬಿಜೆಪಿ ಹಿರಿಯ ನಾಯಕ ದೇವೇಂದ್ರ ಫಡಣವೀಸ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಹರಿಹಾಯ್ದಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಫಡಣವೀಸ್‌, ‘ಅಪ್ರಾಮಾಣಿಕತೆಯಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಬಿಜೆಪಿ ಈಗಲೂ ಮೊದಲ ಸ್ಥಾನದಲ್ಲಿದೆ‘ ಎಂದು ಹೇಳಿದರು.

ಶಿವಸೇನಾ ಆಯೋಜಿಸಿದ್ದ ವಾರ್ಷಿಕ ದಸರಾ ಮೆರವಣಿಗೆಯಲ್ಲಿ ಉದ್ಧವ್‌ ಠಾಕ್ರೆ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾರನೇ ದಿನ ಫಡಣವೀಸ್ ಅವರು ಈ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಠಾಕ್ರೆಯವರ ಭಾಷಣ ಅವರಲ್ಲಿರುವ ಹತಾಶೆಯನ್ನು ತೋರಿಸುತ್ತದೆ. ಬಿಜೆಪಿ ವರ್ಚಸ್ಸಿಗೆ ಮಸಿ ಬಳಿಯಲು ನೀವು ಯತ್ನಿಸಬಹುದು. ಆದರೆ ನಮ್ಮ ಪಕ್ಷ ದೃಢವಾಗಿ ನೆಲೆಗೊಂಡಿದೆ. ರಾಜ್ಯದಲ್ಲಿ ಬಿಜೆಪಿ ನಂಬರ್ ಒನ್ ಪಕ್ಷ ಎಂಬುದನ್ನು ನೀವು ಮರೆಯಬಾರದು‘ ಎಂದು ಅವರು ಹೇಳಿದರು.

ಸಾರಾಂಶ

ಶಿವಸೇನಾ ನೇತೃತ್ವದ ಮಹಾ ವಿಕಾಸ ಅಘಾಡಿ (ಎಂವಿಎ) ಸಮ್ಮಿಶ್ರ ಸರ್ಕಾರವು ಮಹಾರಾಷ್ಟ್ರದ ಇತಿಹಾಸದಲ್ಲೇ ಅತ್ಯಂತ ಕಡು ಭ್ರಷ್ಟ ಸರ್ಕಾರವಾಗಿದ್ದು, ಸುಲಿಗೆಯನ್ನೇ ಅಜೆಂಡವಾಗಿಟ್ಟುಕೊಂಡು ಆಡಳಿತ ನಡೆಸುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಹರಿಹಾಯ್ದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.