ಕೋಯಿಕ್ಕೋಡ್: ಕೇರಳ ಮುಸ್ಲಿಮರಲ್ಲಿ ಹೆಚ್ಚು ಜನಪ್ರಿಯವಾಗಿರುವ ‘ಮಾಪ್ಪಿಳ ಪಾಟ್ಟ್’ ಎಂಬ ಗೀತೆಗಳ ರಚನೆಕಾರ ವಿ.ಎಂ.ಕುಟ್ಟಿ (86) ಅವರು ಹೃದಯಾಘಾತದಿಂದಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.
ಅವರು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ‘ಮಾಪ್ಪಿಳ ಪಟ್ಟಿಂಟೆ ಲೋಕಂ’, ‘ಭಕ್ತಿಗೀತಂಗಳ್’, ‘ಕುರುತ್ತಿಕುಂಜು’ ಹಾಗೂ ‘ಬಶೀರ್ ಮಾಲಾ’ ಅವರ ಇತರ ಹೆಸರಾಂತ ಕೃತಿಗಳು.
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜರಾಗಿದ್ದ ಅವರು, ಇನ್ಸ್‌ಟಿಟ್ಯೂಟ್ ಆಫ್ ಮಾಪ್ಪಿಳ ಸ್ಟಡೀಸ್‌ನ ಗೌರವ ಕಾರ್ಯದರ್ಶಿಯಾಗಿ ಬಹುಕಾಲ ಸೇವೆ ಸಲ್ಲಿಸಿದ್ದರು.
ಕೇರಳದ ಮಲಬಾರ್‌ನ ಮುಸ್ಲಿ ಸಮುದಾಯದಲ್ಲಿ ಜಾನಪದ ಶೈಲಿಯ ಈ ಗೀತೆಗಳನ್ನು ಹಾಡಲಾಗುತ್ತದೆ. ಈ ಹಾಡುಗಳನ್ನು ಸಂಗ್ರಹಿಸಿ, ಪ್ರಚುರ ಪಡಿಸುವಲ್ಲಿ ಕುಟ್ಟಿ ಅವರ ಕೊಡುಗೆ ಅನನ್ಯ.
ಕೇರಳ ಮುಸ್ಲಿಮರಲ್ಲಿ ಪ್ರಚಲಿತವಿರುವ ‘ಮಾಪ್ಪಿಳ ಪಾಟ್ಟು’ಗಳ ರಚನೆಕಾರ ವಿ.ಎಂ.ಕುಟ್ಟಿ (86) ಅವರು ಹೃದಯಾಘಾತದಿಂದಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.