ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪಂಪೋರ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಇ-ತಯ್ಯಬಾ ಕಮಾಂಡರ್ ಉಮರ್ ಮುಷ್ತಾಕ್ ಖಾಂಡೆಯನ್ನು ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಎಎನ್ಐ ಶನಿವಾರ ಟ್ವೀಟ್ ಮಾಡಿದೆ.
ಈ ವರ್ಷದ ಆಗಸ್ಟ್‌ನಲ್ಲಿ ಪೊಲೀಸರು ಹಿಟ್ ಲಿಸ್ಟ್ ಅನ್ನು ಬಿಡುಗಡೆ ಮಾಡಿದಾಗಿನಿಂದ ಭದ್ರತಾ ಪಡೆಗಳು ಗುರಿ ಇರಿಸಿದ್ದ ಉಗ್ರಗಾಮಿಗಳ ಪೈಕಿ ಖಾಂಡೆ ಸಹ ಒಬ್ಬನಾಗಿದ್ದ.
ಈ ವರ್ಷದ ಆರಂಭದಲ್ಲಿ ಶ್ರೀನಗರ ಜಿಲ್ಲೆಯ ಬಘಾಟ್‌ನಲ್ಲಿ ನಡೆದ ಇಬ್ಬರು ಪೊಲೀಸರ ಹತ್ಯೆಯಲ್ಲಿ ಆತ ಭಾಗಿಯಾಗಿದ್ದನು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಕಾಶ್ಮೀರ) ವಿಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ, ಕಾಶ್ಮೀರದ ಎನ್‌ಕೌಂಟರ್‌ನಲ್ಲಿ ತಪ್ಪಿಸಿಕೊಂಡು ಅಡಗಿ ಕುಳಿತಿರುವ ಉಗ್ರರ ಬೇಟೆಗೆ ಭದ್ರತಾ ಪಡೆ ಕಾರ್ಯಾಚರಣೆ ಮುಂದುವರೆಸಿದೆ.
ಈ ವರ್ಷದ ಆಗಸ್ಟ್‌ನಲ್ಲಿ ಪೊಲೀಸರು ಹಿಟ್ ಲಿಸ್ಟ್ ಅನ್ನು ಬಿಡುಗಡೆ ಮಾಡಿದಾಗಿನಿಂದ ಭದ್ರತಾ ಪಡೆಗಳು ಗುರಿ ಇರಿಸಿದ್ದ ಉಗ್ರಗಾಮಿಗಳ ಪೈಕಿ ಖಾಂಡೆ ಸಹ ಒಬ್ಬನಾಗಿದ್ದ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.