ADVERTISEMENT

PHOTOS: ಮೈ ಜುಮ್ಮೆನಿಸುವ ತಮಿಳುನಾಡಿನ ಗ್ರಾಮೀಣ ಕ್ರೀಡೆ ‘ಜಲ್ಲಿಕಟ್ಟು’

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 10:45 IST
Last Updated 14 ಜನವರಿ 2022, 10:45 IST
   

ಚೆನ್ನೈ: ಪೊಂಗಲ್‌ ಹಬ್ಬದ ಅಂಗವಾಗಿ ತಮಿಳುನಾಡಿನಲ್ಲಿ ಇಂದು (ಶುಕ್ರವಾರ) ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.  ಸಂಕ್ರಾಂತಿ ಹಬ್ಬದ ದಿನದಂದು ಆರಂಭವಾಗುವ ಈ ಆಚರಣೆ ತಮಿಳುನಾಡಿನಲ್ಲಿ ಒಂದು ತಿಂಗಳವರೆಗೆ ನಡೆಯಲಿದೆ.

ತಮಿಳರು ಪೊಂಗಲ್ ಎಂದು ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ. ಅಕ್ಕಿಯಿಂದ ತಯಾರಿಸಿದ ‘ಕೋಲಮ್‌’ಗಳು ಈ ಹಬ್ಬದ ಆಕರ್ಷಣೆ. ಹೊಸದಾಗಿ ಬೆಳೆದ ಭತ್ತದಿಂದ ತೆಗೆದ ಅಕ್ಕಿಕಾಳುಗಳನ್ನು ಹಾಕಿ, ಹೆಸರುಬೇಳೆ ಬೆರೆಸಿ ಪೊಂಗಲ್ ಮಾಡುತ್ತಾರೆ. ಈ ಹಬ್ಬದ ಅಂಗವಾಗಿ ಗೂಳಿ ಪಳಗಿಸುವ ಜಲ್ಲಿಕಟ್ಟು ಕ್ರೀಡೆಯೂ ವಿಜೃಂಭಣೆಯಿಂದ ನಡೆಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ADVERTISEMENT

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.