ADVERTISEMENT

ಬೆಂಗಳೂರು ಏರ್‌ಪೋರ್ಟ್ | ಇಂಡಿಗೊ ವಿಮಾನಗಳ ನಡುವೆ ತಪ್ಪಿದ ಘರ್ಷಣೆ: ತನಿಖೆಗೆ ಆದೇಶ

ನವದೆಹಲಿ (ಪಿಟಿಐ):
Published 19 ಜನವರಿ 2022, 12:09 IST
Last Updated 19 ಜನವರಿ 2022, 12:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಜನವರಿ 9ರ ಬೆಳಿಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಿದ ಎರಡು ಇಂಡಿಗೊ ವಿಮಾನಗಳ ನಡುವೆ ಉಂಟಾಗುತ್ತಿದ್ದ ಡಿಕ್ಕಿಯು ಸ್ವಲ್ಪದರಲ್ಲಿ ತಪ್ಪಿದೆ ಎಂದು ವಾಯುಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎನ ಹಿರಿಯ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಘಟನೆ ಬಗ್ಗೆ ವಿಮಾನ ಸಂಸ್ಥೆಯ ದಾಖಲೆ ಪುಸ್ತಕದಲ್ಲಿ ದಾಖಲಿಸಲಾಗಿಲ್ಲ. ಅಲ್ಲದೆ ಈ ಬಗ್ಗೆ ಭಾರತೀಯ ವಿಮಾನ ನಿಲ್ದಾಣಗಳ ‍ಪ್ರಾಧಿಕಾರವು (ಎಎಐ) ಇನ್ನೂ ವರದಿ ಮಾಡಿಲ್ಲ ಎಂದೂ ಅವರು ಹೇಳಿದರು. 

‘ಘಟನೆ ಬಗ್ಗೆ ಡಿಜಿಸಿಎ ಸಂಸ್ಥೆಯು ತನಿಖೆ ನಡೆಸಲಿದೆ. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿದೆ’ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್‌ ಕುಮಾರ್‌ ಪಿಟಿಐಗೆ ತಿಳಿಸಿದರು. 

ADVERTISEMENT

ಆದರೆ ಘಟನೆ ಬಗ್ಗೆ ಇಂಡಿಗೊ ಮತ್ತು ಎಎಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಾರಾಂಶ

ಜನವರಿ 9 ರ ಬೆಳಿಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಿದ ಎರಡು ಇಂಡಿಗೊ ವಿಮಾನಗಳ ನಡುವೆ ಉಂಟಾಗುತ್ತಿದ್ದ ಡಿಕ್ಕಿಯು ಸ್ವಲ್ಪದರಲ್ಲಿ ತಪ್ಪಿದೆ ಎಂದು ವಾಯುಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎನ ಹಿರಿಯ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.