ನವದೆಹಲಿ: ದ್ವೇಷ ಹರಡುವ ಹಾಗೂ ರಾಷ್ಟ್ರ ವಿರೋಧಿ ಯೂಟ್ಯೂಬ್ ಚಾನೆಲ್ ಗಳನ್ನು ಮುಲಾಜಿಲ್ಲದೇ ಬಂದ್ ಮಾಡಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಗುಡುಗಿದ್ದಾರೆ.
ಕಳೆದ ತಿಂಗಳು ಬಿಪಿನ್ ರಾವತ್ ಅವರ ಬಗ್ಗೆ ತಪ್ಪು ಸುದ್ದಿಗಳನ್ನು ಬಿತ್ತರಿಸಿದ್ದು ಮತ್ತು ದೇಶ ವಿರೋಧಿ ಭಾವನೆ ಮೂಡಿಸಿವೆ ಎಂದು ಕೇಂದ್ರ ಪ್ರಸಾರ ಇಲಾಖೆ 20 ಕ್ಕೂ ಹೆಚ್ಚು ಯೂಟ್ಯೂಬ್ ಚಾನೆಲ್ ಗಳನ್ನು ಬಂದ್ ಮಾಡಲಾಗಿತ್ತು.
ಮತ್ತೆ ಈ ಬಗ್ಗೆ ಎಚ್ಚರಿಕೆ ನೀಡಿರುವ ಸಚಿವರು, ಯೂಟ್ಯೂಬ್ ಚಾನೆಲ್ ಮೂಲಕ ರಾಷ್ಟ್ರ ವಿರೋಧಿ ಕೃತ್ಯದಲ್ಲಿ ತೊಡಗಿರುವ ಹಾಗೂ ದ್ವೇಷ ಹರಡುವ ಸಂಚು ಮಾಡುವರ ಮೇಲೆ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದನ್ನು ಮುಂದುವರೆಸುತ್ತದೆ ಎಂದು ಹೇಳಿದ್ದಾರೆ.
ಯೂಟ್ಯೂಬ್‌ನಲ್ಲಿ ಜನರ ದಾರಿ ತಪ್ಪಿಸುವವರ ಮೇಲೆ, ಸುಳ್ಳು ಹರಡುವವರ ಮೇಲೆ ಅನೇಕ ದೇಶಗಳು ಇಂದು ಕ್ರಮ ಕೈಗೊಳ್ಳುತ್ತಿವೆ. ಯೂಟ್ಯೂಬ್ ಕೂಡ ಇಂತವರ ಮೇಲೆ ನಮ್ಮ ಮನವಿ ಪರಿಗಣಿಸಿ ಕಣ್ಣಿಟ್ಟಿರುವುದು ಸಂತಸ ತರಿಸಿದೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಆಂತರಿಕ ಭದ್ರತಾ ವಿಭಾಗದ ಸಲಹೆ ಮೇರೆಗೆ ಡಿಸೆಂಬರ್‌ನಲ್ಲಿ 20 ಕ್ಕೂ ಹೆಚ್ಚು ಯೂಟ್ಯೂಬ್ ಚಾನೆಲ್ ಗಳನ್ನು ಬಂದ್ ಮಾಡಲಾಗಿತ್ತು.
ಆಂತರಿಕ ಭದ್ರತಾ ವಿಭಾಗದ ಸಲಹೆ ಮೇರೆಗೆ ಡಿಸೆಂಬರ್‌ನಲ್ಲಿ 20 ಕ್ಕೂ ಹೆಚ್ಚು ಯೂಟ್ಯೂಬ್ ಚಾನೆಲ್ ಗಳನ್ನು ಬಂದ್ ಮಾಡಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.