ಅಹಮದಾಬಾದ್: ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆ 2021ರ ಅಡಿಯಲ್ಲಿ ದಾಖಲಾದ ಮೊದಲ ಪ್ರಕರಣದಲ್ಲಿ ಜೈಲಿನಲ್ಲಿರುವ ಆರೋಪಿಗಳ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಈ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವ ಅಂತರ ಧರ್ಮೀಯ ದಂಪತಿಯ ಅರ್ಜಿಗಳನ್ನು ಆಲಿಸುವಾಗ ನ್ಯಾಯಾಲಯ ಈ ತೀರ್ಪು ನೀಡಿದೆ.
ಮಹಿಳೆಯ ಪತಿ, ಮೌಲಾವಿ ಮತ್ತು ಇಬ್ಬರು ಸಾಕ್ಷಿದಾರರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ನ್ಯಾಯಮೂರ್ತಿ ಇಲೇಶ್ ಜೆ ವೋರಾ ಅವರು ಆದೇಶಿಸಿದರು. ದಂಪತಿ ಜೊತೆಯಾಗಿ ವಾಸಿಸಲು ಅನುಮತಿ ನೀಡಿದ ನ್ಯಾಯಮೂರ್ತಿಯವರು, ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗದ ಇನ್ನೊಬ್ಬ ಆರೋಪಿಗೂ ರಕ್ಷಣೆ ನೀಡಿದ್ದಾರೆ. ಇತರ ಮೂವರು ಆರೋಪಿಗಳಿಗೆ ಈಗಾಗಲೇ ಜಾಮೀನು ದೊರೆತಿದೆ.
ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿರುವ ಅರ್ಜಿಯನ್ನು ಮುಂದಿನ ವಿಚಾರಣೆಯಲ್ಲಿ ನಿರ್ಧರಿಸಲಾಗುವುದು ಎಂದು ಹೈಕೋರ್ಟ್ ಹೇಳಿದೆ.
ಜೂನ್‌ನಲ್ಲಿ, ರಾಜ್ಯ ಸರ್ಕಾರವು ಮತಾಂತರ ವಿರೋಧಿ ಕಾನೂನು ಜಾರಿಗೆ ತಂದ ಕೆಲವೇ ದಿನಗಳಲ್ಲಿ, 25 ವರ್ಷದ ಮಹಿಳೆ ತನ್ನ ಪತಿ, ಅತ್ತೆ, ಅತ್ತಿಗೆ, ಗಂಡನ ಚಿಕ್ಕಪ್ಪ ಸೇರಿ ಎಂಟು ಜನರ ವಿರುದ್ಧ ವಡೋದರಾದಲ್ಲಿ ಎಫ್ಐಆರ್ ದಾಖಲಿಸಿದ್ದರು. ಸಾಕ್ಷಿಯಾಗಿದ್ದ ಸೋದರ ಸಂಬಂಧಿ ಮತ್ತು ಮೌಲಾವಿ ವಿರುದ್ಧವೂ ಬಲವಂತದ ಮದುವೆ, ಬಲವಂತದ ಧಾರ್ಮಿಕ ಮತಾಂತರ, ಅತ್ಯಾಚಾರ, ಇತರ ಆರೋಪಗಳನ್ನು ಹೊರಿಸಲಾಗಿತ್ತು.
ಎಫ್‌ಐಆರ್ ದಾಖಲಾದ ತಿಂಗಳ ನಂತರ, ದಂಪತಿ ಮತ್ತು ಇತರ ಏಳು ಆರೋಪಿಗಳು ಜಂಟಿಯಾಗಿ ಎಫ್‌ಐಆರ್ ರದ್ದುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.
ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆ 2021ರ ಅಡಿಯಲ್ಲಿ ದಾಖಲಾದ ಮೊದಲ ಪ್ರಕರಣದಲ್ಲಿ ಜೈಲಿನಲ್ಲಿರುವ ಆರೋಪಿಗಳ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ಬುಧವಾರ ಆದೇಶಿಸಿದೆ. ಈ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವ ಅಂತರ ಧರ್ಮೀಯ ದಂಪತಿಯ ಅರ್ಜಿಗಳನ್ನು ಆಲಿಸುವಾಗ ನ್ಯಾಯಾಲಯ ಈ ತೀರ್ಪು ನೀಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.