ನವದೆಹಲಿ: ದುರ್ಗಾ ಪೂಜೆ ಸಂದರ್ಭ ಯಮುನಾ ನದಿ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ದೇವಿಯ ಪ್ರತಿಮೆಗಳನ್ನು ವಿಸರ್ಜನೆ ಮಾಡುವುದನ್ನು ನಿಷೇಧಿಸಿ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ(ಡಿಪಿಸಿಸಿ) ಆದೇಶ ಹೊರಡಿಸಿದೆ.
ಆದೇಶವನ್ನು ಮೀರಿ ನಡೆದುಕೊಂಡರೆ ಸೆಕ್ಷನ್ 33 ಎ ಜಲ (ಸಂರಕ್ಷಣೆ ಮತ್ತು ಮಾಲಿನ್ಯ ತಡೆ) ನೀತಿ. 1974ರ ಅಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಗೂ 6 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಡಿಪಿಸಿಸಿ ಎಚ್ಚರಿಕೆ ನೀಡಿದೆ.
ದುರ್ಗಾ ಮೂರ್ತಿ ಸೇರಿದಂತೆ ಯಾವುದೇ ಮೂರ್ತಿಗಳನ್ನು ತಯಾರಿಸುವ ವೇಳೆ ನೈಸರ್ಗಿಕ ಮಣ್ಣನ್ನು ಮಾತ್ರ ಬಳಸಬೇಕು. ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಿದ ಬಣ್ಣಗಳನ್ನು ಬಳಿಯಬಾರದು ಎಂದು ಮೂರ್ತಿ ತಯಾರಕರಿಗೆ ಡಿಪಿಸಿಸಿ ತಿಳಿಸಿದೆ.
ಮನೆಯಲ್ಲಿ ಬಕೆಟ್‌ಗಳ ಸಹಾಯದಿಂದ ದೇವಿಯ ಮೂರ್ತಿಯನ್ನು ವಿಸರ್ಜಿಸಬಹುದು. ಆದರೆ ಸಾರ್ವಜನಿಕ ಸ್ಥಳಗಳಲ್ಲಿರುವ ಕೆರೆ, ಹಳ್ಳ, ನದಿಗಳಲ್ಲಿ ಮೂರ್ತಿ ವಿಸರ್ಜನೆ ಮಾಡಬಾರದು ಎಂದು ಡಿಪಿಸಿಸಿ ಪ್ರಕಟಣೆ ಮೂಲಕ ಆದೇಶಿಸಿದೆ.
ಮೂರ್ತಿಗಳನ್ನು ತಯಾರಿಸುವ ವೇಳೆ ರಾಸಾಯನಿಕ ವಸ್ತುಗಳನ್ನು ಬಳಸುವುದರಿಂದ ನೀರು ಮಲಿನಗೊಳ್ಳುತ್ತದೆ. ಮೂರ್ತಿಗಳಿಗೆ ಬಳಿಯುವ ಬಣ್ಣಗಳಿಂದಲೂ ನೀರಿನ ಮಾಲಿನ್ಯವಾಗುತ್ತದೆ. ಇದು ಹಲವು ಅಧ್ಯಯನಗಳಿಂದಲೂ ತಿಳಿದುಬಂದಿದೆ ಎಂದು ಡಿಪಿಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ದುರ್ಗಾ ಪೂಜೆ ಸಂದರ್ಭ ಯಮುನಾ ನದಿ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ದೇವಿಯ ಪ್ರತಿಮೆಗಳನ್ನು ವಿಸರ್ಜನೆ ಮಾಡುವುದನ್ನು ನಿಷೇಧಿಸಿ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ(ಡಿಪಿಸಿಸಿ) ಆದೇಶ ಹೊರಡಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.