ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್–19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ಈಗ ದೆಹಲಿ ಸರ್ಕಾರವು ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸುವ ಆರ್‌ಟಿ–ಪಿಸಿಆರ್ ಕೋವಿಡ್–19 ಪರೀಕ್ಷೆಗೆ ಗರಿಷ್ಠ ದರ ನಿಗದಿ ಪಡಿಸಿದೆ. ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲು ₹300ರಿಂದ ₹500 ನಿಗದಿ ಪಡಿಸಿರುವುದಾಗಿ ಆರೋಗ್ಯ ಇಲಾಖೆಯು ಅಧಿಸೂಚನೆಯಲ್ಲಿ ತಿಳಿಸಿದೆ.
ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳಿಗೆ ₹100 ಪಡೆಯುವಂತೆ ತಿಳಿಸಲಾಗಿದೆ.
ಕೋವಿಡ್ ಪರೀಕ್ಷೆಗಾಗಿ ಸರ್ಕಾರದ ಸಿಬ್ಬಂದಿ ಸಂಗ್ರಹಿಸುವ ಮಾದರಿಗಳನ್ನು ಜಿಲ್ಲಾಡಳಿಡ ಅಥವಾ ಆಸ್ಪತ್ರೆಗಳ ಮನವಿ ಮೇರೆಗೆ ಪರೀಕ್ಷೆಗೆ ಒಳಪಡಿಸುವ ಖಾಸಗಿ ವಲಯದ ಪ್ರಯೋಗಾಲಯಗಳಿಗೆ ಆರ್‌ಟಿ–ಪಿಸಿಆರ್ ಪರೀಕ್ಷೆಗೆ ₹200 ನಿಗದಿ ಮಾಡಲಾಗಿದೆ. ಖಾಸಗಿ ಪ್ರಯೋಗಾಲಯದ ತಂಡದವರೇ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸುವುದಾದರೆ, ₹300 ನಿಗದಿಯಾಗಿದೆ. ಜನರ ಮನೆಗಳಿಗೆ ತೆರಳಿ ಮಾದರಿ ಸಂಗ್ರಹಿ, ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಒಳಪಡಿಸಿದರೆ, ₹500 ಶುಲ್ಕ ವಿಧಿಸಬಹುದಾಗಿದೆ.
ದೆಹಲಿಯಲ್ಲಿ ಗುರುವಾರ ಕೋವಿಡ್ ದೃಢಪಟ್ಟ 12,306 ಹೊಸ ಪ್ರಕರಣಗಳು ದಾಖಲಾಗಿವೆ ಹಾಗೂ 43 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ ಕೋವಿಡ್ ದೃಢ ಪ್ರಮಾಣ ಶೇಕಡ 21.48ರಷ್ಟಿದೆ.
ದೇಶದ ಶೇಕಡ 72ರಷ್ಟು ಜನರು ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. 15–18 ವರ್ಷ ವಯಸ್ಸಿನ ಶೇಕಡ 52ರಷ್ಟು ಮಂದಿ ಕೋವಿಡ್–19 ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ದೇಶದಾದ್ಯಂತ ಇಂದು 3,17,532 ಹೊಸ ಪ್ರಕರಣಗಳು ದಾಖಲಾಗಿವೆ.
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್–19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ಈಗ ದೆಹಲಿ ಸರ್ಕಾರವು ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸುವ ಆರ್‌ಟಿ–ಪಿಸಿಆರ್ ಕೋವಿಡ್–19 ಪರೀಕ್ಷೆಗೆ ಗರಿಷ್ಠ ದರ ನಿಗದಿ ಪಡಿಸಿದೆ. ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲು ₹300ರಿಂದ ₹500 ನಿಗದಿ ಪಡಿಸಿರುವುದಾಗಿ ಆರೋಗ್ಯ ಇಲಾಖೆಯು ಅಧಿಸೂಚನೆಯಲ್ಲಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.