ನವದೆಹಲಿ: ದೇಶದಲ್ಲಿ 12 ರಿಂದ 14 ವರ್ಷದ ಮಕ್ಕಳಿಗೆ ಮಾರ್ಚ್ ತಿಂಗಳಿಂದ ಕೋವಿಡ್ ಲಸಿಕೆ ಹಾಕುವ ಸಾಧ್ಯತೆ ಇದೆ ಎಂದು ಕೋವಿಡ್–19 ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (ಎನ್‌ಟಿಎಜಿಐ) ಅಧ್ಯಕ್ಷ ಡಾ. ಎನ್.ಕೆ ಅರೋರಾ ಸೋಮವಾರ ಹೇಳಿದ್ದಾರೆ.
15ರಿಂದ 18 ವರ್ಷ ವಯೋಮಾನದವರಿಗೆ ಲಸಿಕೆ ನೀಡಿಕೆ ಪೂರ್ಣಗೊಂಡ ಬಳಿಕ 12ರಿಂದ 14 ವರ್ಷ ವಯೋಮಾನದವರಿಗೆ ಲಸಿಕೆ ನೀಡುವ ಅಭಿಯಾನ ಆರಂಭಿಸುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದೂ ಅವರು ತಿಳಿಸಿದ್ದಾರೆ
15–18 ವರ್ಷ ವಯೋಮಾನದ ಅಂದಾಜು 7.4 ಕೋಟಿ ಮಂದಿಯಲ್ಲಿ, ಈಗಾಗಲೇ 3.45 ಕೋಟಿಗೂ ಅಧಿಕ ಮಂದಿ ಕೋವ್ಯಾಕ್ಸಿನ್‌ನ ಮೊದಲ ಡೋಸ್ ಪಡೆದುಕೊಂಡಿದ್ದಾರೆ. 28 ದಿನಗಳಲ್ಲಿ ಇವರು ಎರಡನೇ ಡೋಸ್ ಪಡೆದುಕೊಳ್ಳಲಿದ್ದಾರೆ ಎಂದು ವಿವರಿಸಿದ್ದಾರೆ.
‘15– 18 ವರ್ಷ ವಯೋಮಾನದವರು ಲಸಿಕೆ ಹಾಕಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ. ಲಸಿಕೆ ನೀಡಿಕೆಯ ವೇಗವನ್ನು ಅನುಸರಿಸಿ ಈ ವಯೋಮಾನದ ಇನ್ನುಳಿದವರು ಜನವರಿ ಅಂತ್ಯದ ವೇಳೆಗೆ ಮತ್ತು ನಂತರದಲ್ಲಿ ಮೊದಲ ಡೋಸ್ ಪಡೆದುಕೊಳ್ಳುವ ಸಾಧ್ಯತೆ ಇದೆ. ಫೆಬ್ರುವರಿ ಅಂತ್ಯಕ್ಕೆ ಅವರ ಎರಡನೇ ಡೋಸ್ ಕೂಡ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಅರೋರಾ ತಿಳಿಸಿದ್ದಾರೆ.
12 – 14 ವರ್ಷ ವಯೋಮಾನದವರು ಅಂದಾಜು 7.5 ಕೋಟಿ ಮಂದಿ ಇದ್ದಾರೆ.
ಸರ್ಕಾರದ ಅಂಕಿ–ಅಂಶಗಳ ಪ್ರಕಾರ, 15-18 ವರ್ಷ ವಯೋಮಾನದವರಿಗೆ ಇದುವರೆಗೆ 3.45 ಕೋಟಿಗೂ ಹೆಚ್ಚು ಮೊದಲ ಡೋಸ್‌ಗಳನ್ನು ನೀಡಲಾಗಿದೆ.
ದೇಶದಲ್ಲಿ 12 ರಿಂದ 14 ವರ್ಷದ ಮಕ್ಕಳಿಗೆ ಮಾರ್ಚ್ ತಿಂಗಳಿಂದ ಕೋವಿಡ್ ಲಸಿಕೆ ಹಾಕುವ ಸಾಧ್ಯತೆ ಇದೆ ಎಂದು ಕೋವಿಡ್–19 ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (ಎನ್‌ಟಿಎಜಿಐ) ಅಧ್ಯಕ್ಷ ಡಾ. ಎನ್.ಕೆ ಅರೋರಾ ಡಾ.ಎನ್.ಕೆ. ಅರೋರಾ ಸೋಮವಾರ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.