ನವದೆಹಲಿ: ದೆಹಲಿ ಸರ್ಕಾರದ 50 ಇಲಾಖೆಗಳ 180 ನೂತನ ವೆಬ್‌ಸೈಟ್‌ಗಳನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಉದ್ಘಾಟಿಸಿದರು.
ಸರ್ಕಾರದ ಹಿಂದಿನ ವೆಬ್‌ಸೈಟ್‌ಗಳು ಹಳೇ ತಂತ್ರಜ್ಞಾನ ಹೊಂದಿದ್ದವು. ಇವು ಬಳಕೆದಾರ ಸ್ನೇಹಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ವೆಬ್‌ಸೈಟ್‌ಗಳನ್ನು ರೂಪಿಸಲಾಗಿದೆ ಎಂದು ದೆಹಲಿ ಸರ್ಕಾರ ಹೇಳಿದೆ.
ಸಾರಿಗೆ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳ ವೆಬ್‌ಗಳಿಗೆ ಚಾಲನೆ ಮಾಡುವ ಮೂಲಕ 180 ವೆಬ್‌ಸೈಟ್‌ಗಳನ್ನು ಕೇಜ್ರಿವಾಲ್ ಉದ್ಘಾಟನೆ ಮಾಡಿದರು.
ಕಂದಾಯ ಹಾಗೂ ಹಣಕಾಸು ಸಚಿವ ಕೈಲಾಶ್ ಗೆಹಲೋತ್ ಮಾತನಾಡಿ, ಹಳೆಯ ವೆಬ್‌ಸೈಟ್‌ಗಳನ್ನು 15 ವರ್ಷಗಳ ಹಿಂದೆ ಅಪ್ಡೇಟ್ ಮಾಡಲಾಗಿತ್ತು.
ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಹೊಸ ಸೈಟ್‌ಗಳನ್ನು ಬದಲಿಸಲಾಗಿದೆ. ಈ ವೆಬ್‌ಸೈಟ್‌ಗಳನ್ನು ಬಳಕೆದಾರರ ಸ್ನೇಹಿಯಾಗಿ ರೂಪಿಸಲಾಗಿದೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.