ADVERTISEMENT

ಸಿಬಿಎಸ್‌ಇ: 10ನೇ ತರಗತಿ ಪರೀಕ್ಷೆ ನ.30ರಿಂದ, 12ನೇ ತರಗತಿ ಪರೀಕ್ಷೆ ಡಿ.1ರಿಂದ

ಪ್ರಜಾವಾ‌ಣಿ ವೆಬ್ ಡೆಸ್ಕ್‌
Published 18 ಅಕ್ಟೋಬರ್ 2021, 16:33 IST
Last Updated 18 ಅಕ್ಟೋಬರ್ 2021, 16:33 IST
   

ದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ 10 ನೇ ತರಗತಿಯ ಪ್ರಥಮಾವಧಿಯ ಪರೀಕ್ಷೆಗಳು ನವೆಂಬರ್ 30ರಿಂದ ಆರಂಭವಾಗಲಿದ್ದು, 12ನೇ ತರಗತಿಯ ಪರೀಕ್ಷೆಗಳು ಡಿಸೆಂಬರ್ 1ರಂದು ನಿಗದಿಯಾಗಿದೆ. 

ಸಿಬಿಎಸ್‌ಇ ಕಳೆದ ವರ್ಷದವರೆಗೆ ಅನುಸರಿಸಿದ ಒಂದು ವಾರ್ಷಿಕ ಪರೀಕ್ಷಾ ಮಾದರಿಯ ಬದಲಿಗೆ, ಇನ್ನು ಮುಂದೆ ಎರಡು ಬೋರ್ಡ್ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಪ್ರೌಢ ಮತ್ತು ಹಿರಿಯ ಮಾಧ್ಯಮಿಕ ವಿದ್ಯಾರ್ಥಿಗಳಿಗೆ ಎರಡನೇ ಅವಧಿಯ ಪರೀಕ್ಷೆಗಳನ್ನು ಫೆಬ್ರವರಿ-ಮಾರ್ಚ್ 2022ರಲ್ಲಿ ನಡೆಸಲಾಗುತ್ತದೆ.

ಪರೀಕ್ಷಾ ವೇಳಾ ಪಟ್ಟಿಯನ್ನು ಶೀಘ್ರದಲ್ಲೇ ಪ್ರತ್ಯೇಕವಾಗಿ ಶಾಲೆಗಳಿಗೆ ಕಳುಹಿಸಲಾಗುತ್ತದೆ ಎಂದು  ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್ ತಿಳಿಸಿದ್ದಾರೆ. 

ADVERTISEMENT
ಸಾರಾಂಶ

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ 10 ನೇ ತರಗತಿಯ ಪ್ರಥಮಾವಧಿಯ ಪರೀಕ್ಷೆಗಳು ನವೆಂಬರ್ 30ರಿಂದ ಆರಂಭವಾಗಲಿದ್ದು, 12ನೇ ತರಗತಿಯ ಪರೀಕ್ಷೆಗಳು ಡಿಸೆಂಬರ್ 1ರಂದು ನಿಗದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.