ADVERTISEMENT

ಶ್ರೀಲಂಕಾಗೆ ಸೇನಾಪಡೆ ಮುಖ್ಯಸ್ಥ ಜ.ನರವಣೆ ಭೇಟಿ

ನವದೆಹಲಿ (ಪಿಟಿಐ):
Published 12 ಅಕ್ಟೋಬರ್ 2021, 10:55 IST
Last Updated 12 ಅಕ್ಟೋಬರ್ 2021, 10:55 IST
ಜನರಲ್ ಎಂ.ಎಂ.ನರವಣೆ
ಜನರಲ್ ಎಂ.ಎಂ.ನರವಣೆ   

ನವದೆಹಲಿ: ಮಿಲಿಟರಿ ಸಹಕಾರ, ಪ್ರಾದೇಶಿಕ ಭದ್ರತೆ ಎದುರಿಸುತ್ತಿರುವ ಸವಾಲುಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ವೃದ್ಧಿ ಕುರಿತು ಚರ್ಚಿಸುವ ಸಂಬಂಧ ಸೇನಾಪಡೆ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು ಮಂಗಳವಾರದಿಂದ ನಾಲ್ಕು ದಿನಗಳ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ.

ದ್ವೀಪರಾಷ್ಟ್ರದಲ್ಲಿ ಚೀನಾ ತನ್ನ ಪ್ರಭಾವ ವೃದ್ಧಿಸಲು ಹವಣಿಸುತ್ತಿರುವ ಹಿನ್ನೆಲೆಯಲ್ಲಿ ಸೇನಾಪಡೆ ಮುಖ್ಯಸ್ಥ ಜನರಲ್‌ ನರವಣೆ ಅವರ ಈ ಭೇಟಿಗೆ ಮಹತ್ವ ಬಂದಿದೆ.

ಅಧ್ಯಕ್ಷ ಗೋಟಬಯ ರಾಜಪಕ್ಸ, ಪ್ರಧಾನಿ ಮಹಿಂದ ರಾಜಪಕ್ಸ ಅವರನ್ನು ಜನರಲ್‌ ನರವಣೆ ಭೇಟಿ ಮಾಡಲಿದ್ದು, ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿ ಕುರಿತು ಚರ್ಚಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

 ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗ್ಲಾ ಅವರು ಇತ್ತೀಚೆಗಷ್ಟೇ ಶ್ರೀಲಂಕಾಕ್ಕೆ ಭೇಟಿ ನೀಡಿ, ಉನ್ನತ ಮಟ್ಟದ ಮಾತುಕತೆ ಕೈಗೊಂಡಿದ್ದನ್ನು ಸ್ಮರಿಸಬಹುದು.

ಸಾರಾಂಶ

ಮಿಲಿಟರಿ ಸಹಕಾರ, ಪ್ರಾದೇಶಿಕ ಭದ್ರತೆ ಎದುರಿಸುತ್ತಿರುವ ಸವಾಲುಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ವೃದ್ಧಿ ಕುರಿತು ಚರ್ಚಿಸುವ ಸಂಬಂಧ ಸೇನಾಪಡೆ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು ಮಂಗಳವಾರದಿಂದ ನಾಲ್ಕು ದಿನಗಳ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.