ನವದೆಹಲಿ: ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಸೇರಿದಂತೆ ಏಳು ಜನ ನ್ಯಾಯಮೂರ್ತಿಗಳನ್ನು ವಿವಿಧೆಡೆ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.
ಇದೇ ವೇಳೆ ಮೂವರು ವಕೀಲರು ಹಾಗೂ ನ್ಯಾಯಾಂಗ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿದೆ.
ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಅವರನ್ನು ಪಟ್ನಾ ಹೈಕೋರ್ಟ್‌ಗೆ ವರ್ಗಾಯಿಸಲಾಗಿದ್ದು, ನ್ಯಾಯಮೂರ್ತಿ ರಾಜನ್ ಗುಪ್ತಾ ಅವರನ್ನು ಪಂಜಾಬ್– ಹರಿಯಾಣ ಹೈಕೋರ್ಟ್‌ನಿಂದ ಪಟ್ನಾ ಹೈಕೋರ್ಟ್‌ಗೆ, ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಅವರನ್ನು ಮದ್ರಾಸ್ ಹೈಕೋರ್ಟ್‌ನಿಂದ ಕಲ್ಕತ್ತಾ ಹೈಕೋರ್ಟ್‌ಗೆ, ನ್ಯಾಯಮೂರ್ತಿ ಸುರೇಶ್ವರ ಠಾಕೂರ್ ಅವರನ್ನು ಹಿಮಾಚಲ ಪ್ರದೇಶ ಹೈಕೋರ್ಟ್‌ನಿಂದ ಪಂಜಾಬ್– ಹರಿಯಾಣ ಹೈಕೋರ್ಟ್‌ಗೆ, ನ್ಯಾಯಮೂರ್ತಿ ಸಂಜೀವ ಪ್ರಕಾಶ ಶರ್ಮಾ ಅವರನ್ನು ರಾಜಸ್ಥಾನ ಹೈಕೋರ್ಟ್‌ನಿಂದ ಪಟ್ನಾ ಹೈಕೋರ್ಟ್‌ಗೆ, ನ್ಯಾಯಮೂರ್ತಿ ಟಿ.ಅಮರನಾಥ ಗೌಡ ಅವರನ್ನು ತೆಲಂಗಾಣ ಹೈಕೋರ್ಟ್‌ನಿಂದ ತ್ರಿಪುರಾ ಹೈಕೋರ್ಟ್‌ಗೆ, ನ್ಯಾಯಮೂರ್ತಿ ಸುಭಾಷ ಚಂದ್ ಅವರನ್ನು ಅಲಹಾಬಾದ್ ಹೈಕೋರ್ಟ್‌ನಿಂದ ಜಾರ್ಖಂಡ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ.
ಅಲ್ಲದೆ, ವಕೀಲರಾದ ಫರ್ಜಂದ್ ಅಲಿ, ಸುದೇಶ್ ಬನ್ಸಲ್, ಅನೂಪಕುಮಾರ್ ಧಂಡ್ ಹಾಗೂ ನ್ಯಾಯಾಂಗ ಇಲಾಖೆ ಅಧಿಕಾರಿಗಳಾದ ವಿನೋದ ಕುಮಾರ್ ಭರ್ವಾನಿ ಮತ್ತು ಮದನಗೋಪಾಲ ವ್ಯಾಸ್ ಅವರನ್ನು ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ರಾಷ್ಟ್ರಪತಿಯವರ ಅನುಮೋದನೆಯೊಂದಿಗೆ ನೇಮಿಸಲಾಗಿದೆ.
ವಿವಿಧ ಹೈಕೋರ್ಟ್‌ಗಳಿಗೆ 9 ಜನ ಮುಖ್ಯ ನ್ಯಾಯಮೂರ್ತಿಗಳು ಹಾಗೂ 106 ನ್ಯಾಯಾಧೀಶರ ನೇಮಕಕ್ಕಾಗಿ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಮೇ ತಿಂಗಳಿಂದ ಇದುವರೆಗೆ ಶಿಫಾರಸು ಮಾಡಿತ್ತು.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಸೇರಿದಂತೆ ಏಳು ಜನ ನ್ಯಾಯಮೂರ್ತಿಗಳನ್ನು ವಿವಿಧೆಡೆ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ. ಇದೇ ವೇಳೆ ಮೂವರು ವಕೀಲರು ಹಾಗೂ ನ್ಯಾಯಾಂಗ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.