ADVERTISEMENT

ಅಸ್ಸಾಂ: ಐಎಸ್‌ಐ, ಅಲ್‌–ಕೈದಾ ಉಗ್ರರಿಂದ ದಾಳಿ ಎಚ್ಚರಿಕೆ

ನವದೆಹಲಿ (ಪಿಟಿಐ):
Published 18 ಅಕ್ಟೋಬರ್ 2021, 16:51 IST
Last Updated 18 ಅಕ್ಟೋಬರ್ 2021, 16:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುವಾಹಟಿ: ರಾಜ್ಯದಲ್ಲಿ ಐಎಸ್‌ಐ ಹಾಗೂ ಅಲ್‌–ಕೈದಾ ಉಗ್ರರು ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆಗಳಿವೆ ಎಂದು ಅಸ್ಸಾಂ ಪೊಲೀಸರು ಎಚ್ಚರಿಕೆ ಶನಿವಾರ ನೀಡಿದ್ದಾರೆ.

‘ರಾಜ್ಯದಲ್ಲಿ ಮುಸ್ಲಿಮರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಸಂಘಟನೆಗಳು ದಾಳಿ ನಡೆಸುವ ಸಾಧ್ಯತೆಗಳಿವೆ’ ಎಂದು ರಾಜ್ಯದ ಸಹಾಯಕ ಐಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

‘ಆರ್‌ಎಸ್‌ಎಸ್‌ ಕಾರ್ಯಕರ್ತರು ಹಾಗೂ ಭದ್ರತಾಪಡೆಗಳ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ ಹಾಗೂ ದೇಶದ ಇತರ ಭಾಗಗಳಲ್ಲಿ ದಾಳಿ ನಡೆಸಲು ಐಎಸ್‌ಐ ಸಂಚು ರೂಪಿಸಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಸಮಾವೇಶಗಳು, ಧಾರ್ಮಿಕ ಸ್ಥಳಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸ್ಥಳಗಳಲ್ಲಿ ಬಾಂಬ್‌ಗಳು ಹಾಗೂ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಸ್ಫೋಟಿಸಲು ಜಾಗತಿಕ ಮಟ್ಟದ ಉಗ್ರ ಸಂಘಟನೆಗಳು ಸಹ ಸಂಚು ರೂಪಿಸಿವೆ’ ಎಂದು ಅವರು ಎಚ್ಚರಿಸಿದ್ದಾರೆ.

ಸಾರಾಂಶ

ರಾಜ್ಯದಲ್ಲಿ ಐಎಸ್‌ಐ ಹಾಗೂ ಅಲ್‌–ಕೈದಾ ಉಗ್ರರಿಂದ ಸಂಭಾವ್ಯ ದಾಳಿ ಕುರಿತು ಅಸ್ಸಾಂ ಪೊಲೀಸರು ಎಚ್ಚರಿಕೆ ಶನಿವಾರ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.