ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ 'ರಾಮ ನವಮಿ' ಮತ್ತು 'ಮಹಾ ನವಮಿ' ನಡುವಣ ವ್ಯತ್ಯಾಸ ಗೊತ್ತಿಲ್ಲ ಎಂದು ಭಾರತೀಯ ಜನತಾ ಪಕ್ಷವು (ಬಿಜೆಪಿ) ವ್ಯಂಗ್ಯವಾಡಿದೆ.
ವಿಶ್ವದಾದ್ಯಂತ ಹಿಂದೂಗಳು ಮಹಾ ನವಮಿ ಆಚರಿಸುತ್ತಿರುವ ಸಂದರ್ಭದಲ್ಲಿ ಶುಭ ಹಾರೈಸಿದ ಅಖಿಲೇಶ್, ತಮ್ಮ ಸಂದೇಶದಲ್ಲಿ ಮಹಾ ನಮವಿ ಬದಲು ರಾಮ ನವಮಿ ಎಂದು ತಪ್ಪಾಗಿ ಉಲ್ಲೇಖಿಸಿದ್ದರು. ಬಳಿಕ ಇದನ್ನು ಅಳಿಸಿ ಹಾಕಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ, 'ನವ ಹಿಂದೂ' ಆಗಿರುವ ಅಖಿಲೇಶ್‌ಗೆ ರಾಮ ನವಮಿ ಮತ್ತು ಮಹಾ ನವಮಿ ನಡುವಣ ವ್ಯತ್ಯಾಸ ತಿಳಿದಿಲ್ಲ ಎಂದು ಟೀಕಿಸಿದೆ.
ರಾಮ ನವಮಿ ಹಾಗೂ ಮಹಾ ನವಮಿ ನಡುವಣ ವ್ಯತ್ಯಾಸ ತಿಳಿಯದ ಅಖಿಲೇಶ್ ಅವರು ರಾಮ ಮತ್ತು ಪರಶುರಾಮರ ಬಗ್ಗೆ ಮಾತನಾಡುತ್ತಾರೆ. ಜನರನ್ನು ಮೂರ್ಖರನ್ನಾಗಿಸಬೇಡಿ ಎಂದು ಹೇಳಿದೆ.
'ಕರಸೇವಕರ ಮೇಲೆ ನಿರಂತರ ಆರೋಪ ಮಾಡುವವರು ಚುನಾವಣೆ ಸಮೀಪಿಸುವಾಗ ಹಿಂದೂಗಳಂತೆ ನಾಟಕ ಮಾಡಿದಾಗ ಹೀಗೆ ಸಂಭವಿಸುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ರಾಮ ನವಮಿಯನ್ನು 'ಚೈತ್ರ' ಮಾಸದಲ್ಲಿ ಆಚರಿಸಲಾಗುತ್ತದೆ. ಈಗ ದುರ್ಗಾ ದೇವತೆಯ ಮಹಾ ನವಮಿ ಆಚರಿಸಲಾಗುತ್ತದೆ' ಎಂದು ಬಿಜೆಪಿ ಮುಖಂಡ ಅಮಿತ್ ಮಾಳವೀಯ ಹೇಳಿದ್ದಾರೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ 'ರಾಮ ನವಮಿ' ಮತ್ತು 'ಮಹಾ ನವಮಿ' ನಡುವಣ ವ್ಯತ್ಯಾಸ ಗೊತ್ತಿಲ್ಲ ಎಂದು ಭಾರತೀಯ ಜನತಾ ಪಕ್ಷವು (ಬಿಜೆಪಿ) ವ್ಯಂಗ್ಯವಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.