ADVERTISEMENT

ಕೋವಿಡ್‌: ಸಕ್ರಿಯ ಪ್ರಕರಣಗಳ ಇಳಿಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 5:41 IST
Last Updated 18 ಅಕ್ಟೋಬರ್ 2021, 5:41 IST
ಕೋವಿಡ್‌ ಸೋಂಕು
ಕೋವಿಡ್‌ ಸೋಂಕು   

ನವದೆಹಲಿ (ಪಿಟಿಐ): ದೇಶದಲ್ಲಿ ಹೊಸದಾಗಿ 13,596 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 3,40,81,315ಕ್ಕೆ ತಲುಪಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 1,89,694ಕ್ಕೆ ಇಳಿದಿದೆ. ಸೋಮವಾರ ಬೆಳಿಗ್ಗೆ 8 ಗಂಟೆಯ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 166 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 4,52,290ಕ್ಕೆ ಏರಿದೆ.

ಕೋವಿಡ್‌ ಸೋಂಕಿನ ದೈನಂದಿನ ಏರಿಕೆ 24 ದಿನಗಳಿಂದ 30 ಸಾವಿರಕ್ಕಿಂತ ಕಡಿಮೆಯಿದೆ. ಅಲ್ಲದೆ ದೈನಂದಿನ ಪ್ರಕರಣಗಳ ಸಂಖ್ಯೆ 113 ದಿನಗಳಿಂದ 50 ಸಾವಿರಕ್ಕಿಂತ ಕಡಿಮೆ ವರದಿಯಾಗಿದೆ.

ADVERTISEMENT

ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 0.5ರಷ್ಟಿದ್ದು ಕೋವಿಡ್‌ ಚೇತರಿಕೆ ಪ್ರಮಾಣವು ಶೇ 98.12ಕ್ಕೆ ತಲುಪಿದೆ.

ಸಾರಾಂಶ

ಭಾರತದಲ್ಲಿ 13,596 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 3,40,81,315 ಕ್ಕೆ ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.