‘ಲವ್ ಜಿಹಾದ್’ ಪ್ರಕರಣವೊಂದನ್ನು ತಡೆದಿರುವುದಾಗಿ ಬಜರಂಗ ದಳ ಹೇಳಿಕೊಂಡಿದೆ. ಜೈಪುರದಿಂದ ಅಜ್ಮೇರ್‌ಗೆ ಸಾಗುತ್ತಿದ್ದ ರೈಲಿನಲ್ಲಿ ಮುಸ್ಲಿಂ ಪುರುಷನ ಜೊತೆ ಹಿಂದೂ ಯುವತಿಯೊಬ್ಬಳು ಪ್ರಯಾಣಿಸುತ್ತಿರುವ ಕುರಿತು ಸುಳಿವು ಸಿಗುತ್ತಲೇ ಸ್ಥಳಕ್ಕೆ ಧಾವಿಸಿ ಅವರಿಬ್ಬರನ್ನು ವಶಕ್ಕೆ ತೆಗೆದುಕೊಂಡು ರೈಲ್ವೇ ಪೊಲೀಸ್ ಠಾಣೆಗೆ (ಜಿಆರ್‌ಪಿಎಫ್) ಒಪ್ಪಿಸಿರುವುದಾಗಿ ಬಜರಂಗ ದಳದ ಸದಸ್ಯರು ಹೇಳಿದ್ದಾರೆ. ಆ ಕುರಿತ ವರದಿಯನ್ನು ಹಲವಾರು ಸ್ಥಳೀಯ ಪತ್ರಿಕಾ ವೆಬ್‌ಸೈಟ್‌ಗಳ ಪ್ರಕಟಿಸಿವೆ. ಈ ವರದಿಯನ್ನು ಸಾಕಷ್ಟು ಫಾಲೋಯರ್‌ಗಳನ್ನು ಹೊಂದಿರುವ ಟ್ವಿಟರ್ ಮತ್ತು ಫೇಸ್‌ಬುಕ್ ಪುಟಗಳು ಹಂಚಿಕೊಂಡಿವೆ.
ಇದು ‘ಲವ್ ಜಿಹಾದ್’ ಪ್ರಕರಣವಲ್ಲ ಎಂದು ಆಲ್ಟ್ ನ್ಯೂಸ್ ವೇದಿಕೆ ವರದಿ ಮಾಡಿದೆ. ಉಜ್ಜೈನ್‌ನ ಜಿಆರ್‌ಪಿ ಇನ್‌ಸ್ಪೆಕ್ಟರ್ ಆರ್.ಎಸ್. ಮಹಾಜನ್ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ. ಈ ಘಟನೆ ಜ.14ರಂದು ನಡೆದಿದೆ. ಮಹಿಳೆ ಮತ್ತು ಪುರಷ ಇಬ್ಬರೂ ವಿವಾಹಿತರು. ಅವರಿಬ್ಬರೂ ರೈಲಿನ ಒಂದೇ ಬೋಗಿಯಲ್ಲಿ ಇಂದೋರ್‌ನಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದರು. ಇಬ್ಬರ ಕುಟುಂಬಗಳೂ ಪರಸ್ಪರ ಪರಿಚಿತ ಕುಟುಂಬಗಳಾಗಿದ್ದವು. ಈ ಪ್ರಕರಣದಲ್ಲಿ ‘ಲವ್ ಜಿಹಾದ್’ ಅಂಶವಿರಲಿಲ್ಲ. ಕೂಡಲೇ ಅವರಿಬ್ಬರನ್ನೂ ಬಿಡುಗಡೆ ಮಾಡಲಾಗಿತು ಎಂದು ಮಹಾಜನ್ ಹೇಳಿದ್ದಾರೆ.
‘ಲವ್ ಜಿಹಾದ್’ ಪ್ರಕರಣವೊಂದನ್ನು ತಡೆದಿರುವುದಾಗಿ ಬಜರಂಗ ದಳ ಹೇಳಿಕೊಂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.