ADVERTISEMENT

Fact check: ಗಡಿ ದಾಟಿ ಬಂದ ಚೀನಾ ಸೈನಿಕರ ಬಂಧನ?

ಕ್ಯಾಂಪಸ್‌ ಕಲರವ
Published 12 ಅಕ್ಟೋಬರ್ 2021, 19:30 IST
Last Updated 12 ಅಕ್ಟೋಬರ್ 2021, 19:30 IST
fact check: ಗಡಿ ದಾಟಿ ಬಂದ ಚೀನಾ ಸೈನಿಕರ ಬಂಧನ?
fact check: ಗಡಿ ದಾಟಿ ಬಂದ ಚೀನಾ ಸೈನಿಕರ ಬಂಧನ?   

ಅರುಣಾಚಲ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಣ್ಣಮಟ್ಟದ ಘರ್ಷಣೆ ನಡೆದಿತ್ತು. ಚೀನಾ ಸೈನಿಕರು ಗಡಿದಾಟಿ ಬಂದಿದ್ದರು ಎನ್ನಲಾಗಿತ್ತು. ಹೀಗೆ ಗಡಿ ದಾಟಿ ಬಂದ ಸುಮಾರು ನೂರು ಸೈನಿಕರನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ. ಗಾಜಿಯಾಬಾದ್‌ನ ಬಿಜೆಪಿ ಸಂಚಾಲಕ ಆನಂದ್ ಕಲ್ರಾ ಅವರು ಚೀನಾ ಸೈನಿಕರನ್ನು ಬಂಧಿಸಲಾಗಿದೆ ಎಂಬುದನ್ನು ಬಿಂಬಿಸುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಹಲವರು ಈ ಚಿತ್ರವನ್ನು ಶೇರ್ ಮಾಡಿದ್ದಾರೆ.

ರಿವರ್ಸ್ ಇಮೇಜ್ ಮೂಲಕ ಪರಿಶೀಲಿಸಿದಾಗ, ಈ ಚಿತ್ರವು ಡಿಸೆಂಬರ್ 2020ರಲ್ಲಿ ಪ್ರಕಟವಾಗಿದೆ ಎಂಬ ವಿಚಾರವನ್ನು ಆಲ್ಟ್ ನ್ಯೂಸ್ ವರದಿ ಮಾಡಿದೆ. ಗಾಲ್ವನ್ ಕಣಿವೆಯಲ್ಲಿ ನಡೆದ ಭಾರತ–ಚೀನಾ ಸಂಘರ್ಷವನ್ನು ನೆನಪಿಸುವ ‘ಎಲ್‌ಎಸಿ’ ಎಂಬ ಸಿನಿಮಾದ ಚಿತ್ರೀಕರಣದ ದೃಶ್ಯಗಳಿವು ಎಂಬುದು ದೃಢಪಟ್ಟಿದೆ. ಯೂಟ್ಯೂಬ್‌ನಲ್ಲಿ ಇದೇ ಚಿತ್ರದ ವಿಡಿಯೊ ಅಪ್‌ಲೋಡ್ ಆಗಿವೆ. ಡೈಲಿ ಎಕ್ಸೈಲ್‌ಸಿಯರ್ ತಾಣವು ಸಿನಿಮಾ ದೃಶ್ಯಗಳನ್ನು 2020ರ ನವೆಂಬರ್‌ನಲ್ಲಿ ಪ್ರಸಾರ ಮಾಡಿತ್ತು. ಚೀನಾ ಸೈನಿಕರನ್ನು ಭಾರತದ ಸೇನೆ ಬಂಧಿಸಿದೆ ಎಂಬುದು ಸುಳ್ಳು ಸುದ್ದಿ.

ಸಾರಾಂಶ

ಅರುಣಾಚಲ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಣ್ಣಮಟ್ಟದ ಘರ್ಷಣೆ ನಡೆದಿತ್ತು. ಚೀನಾ ಸೈನಿಕರು ಗಡಿದಾಟಿ ಬಂದಿದ್ದರು ಎನ್ನಲಾಗಿತ್ತು. ಹೀಗೆ ಗಡಿ ದಾಟಿ ಬಂದ ಸುಮಾರು ನೂರು ಸೈನಿಕರನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ. ಗಾಜಿಯಾಬಾದ್‌ನ ಬಿಜೆಪಿ ಸಂಚಾಲಕ ಆನಂದ್ ಕಲ್ರಾ ಅವರು ಚೀನಾ ಸೈನಿಕರನ್ನು ಬಂಧಿಸಲಾಗಿದೆ ಎಂಬುದನ್ನು ಬಿಂಬಿಸುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಹಲವರು ಈ ಚಿತ್ರವನ್ನು ಶೇರ್ ಮಾಡಿದ್ದಾರೆ.

ADVERTISEMENT

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.