ADVERTISEMENT

ಸಂತೆ ಸಾಮಾಜಿಕ ಜೀವಂತಿಕೆಯ ಲಕ್ಷಣ

ಶಾಲಾ ಆವರಣದಲ್ಲಿ ಮಕ್ಕಳ ಸಂತೆ ಪ್ರಾತ್ಯಕ್ಷಿಕೆ sub

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 14:26 IST
Last Updated 28 ಜನವರಿ 2024, 14:26 IST
<div class="paragraphs"><p>ತೇರದಾಳದ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯ ಬಿ.ಎಂ.ಜಡಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆಗೆ ಸಂಸ್ಥೆಯ ಅಧ್ಯಕ್ಷ ಶಿವಶಂಕರ ಶಿವಾಚಾರ್ಯ ಶ್ರೀ ಹಾಗೂ ಗಣ್ಯರು ತರಕಾರಿ ಖರೀದಿಸಿ ಚಾಲನೆ ನೀಡಿದರು cap</p></div>

ತೇರದಾಳದ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯ ಬಿ.ಎಂ.ಜಡಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆಗೆ ಸಂಸ್ಥೆಯ ಅಧ್ಯಕ್ಷ ಶಿವಶಂಕರ ಶಿವಾಚಾರ್ಯ ಶ್ರೀ ಹಾಗೂ ಗಣ್ಯರು ತರಕಾರಿ ಖರೀದಿಸಿ ಚಾಲನೆ ನೀಡಿದರು cap

   

attri

ಪ್ರಜಾವಾಣಿ ವಾರ್ತೆ

ADVERTISEMENT

ತೇರದಾಳ: ‘ಸಂತೆ, ಜಾತ್ರೆಗಳು ಸಾಂಸ್ಕೃತಿಕ ಹಿನ್ನೆಲೆ ಹೊಂದಿದ್ದು, ಸಾಮಾಜೀಕ ಜೀವಂತಿಕೆಯ ಲಕ್ಷಣವಾಗಿವೆ. ಇಂತಹ ಸಂತೆಯನ್ನು ಶಾಲೆಗಳಲ್ಲಿ ಆಯೋಜಿಸುವುದು ಮಕ್ಕಳಿಗೆ ಪ್ರಾತ್ಯಕ್ಷಿಕೆಯ ಮೂಲಕ ಕಲಿಸುವ ಸುಲಭ ವಿಧಾನ’ ಎಂದು ಪ್ರೌಢಶಾಲಾ ವಿಭಾಗದ ಶಿಕ್ಷಣ ಸಂಯೋಜಕ ಎಸ್.ಬಿ.ಬುರ್ಲಿ ಹೇಳಿದರು.

ಪಟ್ಟಣದ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯ ಬಿ.ಎಂ.ಜಡಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂತೆಯಲ್ಲಿ ಮಕ್ಕಳನ್ನು ಸ್ವತಂತ್ರವಾಗಿ ಬಿಡುವ ಮೂಲಕ ಅವರಿಗೆ ವರ್ಗಕೋಣೆಯಲ್ಲಿ ಕಲಿಸಲಾರದ ಗಣಿತ, ವಿಜ್ಞಾನಗಳ ಅರಿವು ಮೂಡಿಸುವುದಲ್ಲದೆ, ಸಾಮಾಜಿಕ ಮೌಲ್ಯಗಳನ್ನು, ಮಾತುಗಾರಿಕೆ ಕೌಶಲಗಳನ್ನು ಸುಲಭವಾಗಿ ಕಲಿಸುವುದರ ಜೊತೆಗೆ ಪರಸ್ಪರ ಹೊಂದಾಣಿಕೆಯನ್ನು ಕಲಿಸಬಹುದು’ ಎಂದರು.

ಗೋಲಬಾವಿ ವಲಯ ಸಿಆರ್‌ಪಿ ಭರತೇಶ ಯಲ್ಲಟ್ಟಿ ಮಾತನಾಡಿ, ಮಕ್ಕಳಿಗೆ ಕೌಶಲಗಳ ವಿನಿಮಯ ಸಂತೆಗಳಿಂದ ಅತ್ಯಂತ ಸುಲಭವಾಗಿ ಆಗುತ್ತದೆ. ಪಾಲಕರು ಮಕ್ಕಳಿಗೆ ಈ ವಿಷಯದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಮಕ್ಕಳ ಸಾಮಾಜಿಕ ಜ್ಞಾನ ವಿಕಾಸಕ್ಕೆ ಸಂತೆಗಳು ಕಾರಣವಾಗುತ್ತವೆ ಎಂದರು.

ಪ್ರಾಥಮಿಕ ವಿಭಾಗದ ಶಿಕ್ಷಣ ಸಂಯೋಜಕ ಬಿ.ಎಂ.ಹಳೇಮನಿ ಮಾತನಾಡಿದರು.

ಶಿವಶಂಕರ ಶಿವಾಚಾರ್ಯ ಶ್ರೀ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳು ಅಂಗಡಿ ತೆರೆದಿದ್ದ ಜಾಗಕ್ಕೆ ತೆರಳಿ ಕೈ ಚೀಲ ಹಿಡಿದು ತರಕಾರಿ ಖರೀದಿಸುವ ಮೂಲಕ ಮಕ್ಕಳ ಸಂತೆಗೆ ಚಾಲನೆ ನೀಡಿದರು.

ಸಂಸ್ಥೆಯ ಆಡಳಿತಾಧಿಕಾರಿ ಪ್ರಭಾವತಿ ಕೋಷ್ಠಿ, ಎಂ.ಎಂ.ಜಾಡರ, ಚನ್ನಪ್ಪ ಜೈನಾಪುರ, ಶಿವಾನಂದ ಬೆಳಕೂಡ, ಸುಧೀರ ಮಿರ್ಜಿ, ಗಜಾನಂದ ಇಂಗಳಗಿ, ಪ್ರಭು ಬಾದರದಿನ್ನಿ ಸೇರಿದಂತೆ ಶಿಕ್ಷಕರಾದ ಸಂತೋಷ ಖವಾಸಿ, ಶಂಕರ ತಿಗಣಿ, ಉಮೇಶ ಕಳಸದ, ಮಲ್ಲಪ್ಪ ಆಡಿನ, ವಿ.ಎಸ್.ಉಪ್ಪಿನ ಸೇರಿದಂತೆ ಸಿಬ್ಬಂದಿ, ಪಾಲಕರು ಹಾಗೂ ಮಕ್ಕಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.