ಪ್ರಜಾವಾಣಿ ವಾರ್ತೆ
ರಬಕವಿ ಬನಹಟ್ಟಿ: ಸಿ.ಎ ಪರೀಕ್ಷೆಯನ್ನು ಉತ್ತೀರ್ಣ ಮಾಡುವುದು ಸರಳವಾದ ಕಾರ್ಯವಲ್ಲ. ಆದರೂ ಬಡತನದಲ್ಲಿ ಈ ಸಾಧನೆ ಮಾಡಿದ್ದು ಹೆಮ್ಮೆಯ ಸಂಗತಿಯಾಗಿದೆ. ಎಸ್ಎಸ್ಎಲ್‌ಸಿಯಿಂದ ಬಿ.ಕಾಂವರೆಗೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದಿ ಉನ್ನತ ಸ್ಥಾನ ಪಡೆದುಕೊಂಡಿರುವ ಲಕ್ಷ್ಮಿ ಮುನ್ನೊಳ್ಳಿ ಇತರರಿಗೆ ಮಾದರಿಯಾಗಿದ್ಧಾರೆ ಎಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಚೇತನ ಡಾಗಾ ತಿಳಿಸಿದರು.
ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇಲ್ಲಿನ ನೇಕಾರ ಯಶವಂತ ಅವರ ಮಗಳು ಲಕ್ಷ್ಮಿ ಮುನ್ನೊಳ್ಳಿ ಅವರಿಗೆ ಗೆಳೆಯರ ಬಳಗದವರು ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬಡತನ ನಮ್ಮ ಸಾಧನೆಗೆ ಮೆಟ್ಟಿಲಾಗಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ವ್ಯಾಸಂಗ ಮಾಡುವುದರ ಜೊತೆಗೆ ಪಾಲಕರಿಗೆ ಮತ್ತು ಸಮಾಜಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಗಮನ ನೀಡಬೇಕು. ಮಕ್ಕಳ ಯಶಸ್ಸಿನಲ್ಲಿ ಪಾಲಕರ ತ್ಯಾಗ ಬಹಳಷ್ಟು ಇರುತ್ತದೆ ಎಂದು’ ಡಾಗಾ ತಿಳಿಸಿದರು.
ಸಾಮಾಜಿಕ ಕಾರ್ಯಕರ್ತೆ ಶಾಂತಾ ಮಂಡಿ ಮಾತನಾಡಿದರು.
ತಂದೆ ಯಶವಂತ, ತಾಯಿ ಭಾರತಿ, ಚೇತನ ಚೋಪಡೆ, ದೀಪಾ ಜಾಹಗೀರದಾರ, ತನುಜಾ ಪಾಟೀಲ, ಕಿರಣ ಆಳಗಿ ಇದ್ದರು.
Cut-off box - ಸರ್ಕಾರಿ ಶಾಲೆಗಳಲ್ಲೇ ಕಲಿಕೆ ಲಕ್ಷ್ಮಿ ಮುನ್ನೊಳ್ಳಿ ಎಸ್ಎಸ್ಎಲ್‌ಸಿಯನ್ನು ಬನಹಟ್ಟಿಯ ಸರ್ಕಾರಿ ಶಾಲೆಯಲ್ಲಿ ನಂತರ ಪಿಯುಸಿಯನ್ನು ರಬಕವಿ ಬನಹಟ್ಟಿಯ ಸರ್ಕಾರಿ ಪದವಿಪೂರ್ವ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪಡೆದಿದ್ದರು. ಆನಲೈನ್ ಮೂಲಕ ತರಬೇತಿ ಪಡೆದುಕೊಂಡು ಬನಹಟ್ಟಿಯಲ್ಲಿ ಕುಳಿತು ಅಧ್ಯಯನ ಮಾಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.