ಬೆಂಗಳೂರು: ಕಳೆದ ಚುನಾವಣೆಯ ವೇಳೆ ಬಿಜೆಪಿ ನೀಡಿದ್ದ 600 ಕ್ಕೂ ಹೆಚ್ಚಿನ ಭರವಸೆಗಳಲ್ಲಿ ಶೇಕಡಾ 90 ರಷ್ಟು ಭರವಸೆಗಳು ಚರ್ಚೆಗೂ ಬರದೇ ಈಗಾಗಲೇ ಸಮಾಧಿ ಸೇರಿವೆ. ಬಿಜೆಪಿಯ ಸುಳ್ಳಿನ ಭರವಸೆಗಳ ಆತ್ಮಕ್ಕೆ ಎಂದೂ ಶಾಂತಿ ಸಿಗದಿರಲಿ. ಬಿಜೆಪಿಗರ ವಚನ ವಂಚನೆ ಅವರನ್ನು ಕಾಡುತ್ತಲೇ ಇರಲಿ ಎಂದು ಬಿಜೆಪಿ ವಿರುದ್ದ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
‘ರೈತರಿಗೆ ಸಾಲಮನ್ನಾ, ಬೆಂಬಲ ಬೆಲೆ, ಮಹಿಳೆಯರಿಗೆ ₹10,000 ಕೋಟಿಯ ಸ್ತ್ರೀ ಉನ್ನತಿ ನಿಧಿ ಹೀಗೆ 600 ಕ್ಕೂ ಹೆಚ್ಚು ಸುಳ್ಳು ಭರವಸೆಗಳನ್ನು ಕಳೆದ ಚುನಾವಣೆಯ ವೇಳೆ ಬಿಜೆಪಿ ನೀಡಿದೆ. ಬಿಜೆಪಿಗರೇ, ನಿಮ್ಮ ಸುಳ್ಳು ಭರವಸೆಗಳ ಕುರಿತು ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ, ನಿಮ್ಮ ಹತ್ತಿರ ಉತ್ತರವಿದೆಯೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
’ನರೇಗಾ ಯೋಜನೆಯ ಪ್ರಯೋಜನ ಪಡೆಯುತ್ತಿರುವ ಕಾರ್ಮಿಕರಿಗೆ ಮೋದಿ ಸರ್ಕಾರ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಕಡ್ಡಾಯಗೊಳಿಸಿದೆ. ಈ ಕಾರ್ಮಿಕರಿಗೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿಸಲು ಇದೇ ಮಾರ್ಚ್ 31ರ ವರೆಗೆ ಮಾತ್ರ ಸಮಯ ನೀಡಲಾಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಪ್ರಯೋಜನ ಪಡೆಯುತ್ತಿರುವ 14.98 ಕೋಟಿ ಕಾರ್ಮಿಕರ ಬ್ಯಾಂಕ್ ಖಾತೆಗಳು ಇನ್ನೂ ಆಧಾರ್‌ನೊಂದಿಗೆ ಲಿಂಕ್ ಆಗಿಲ್ಲ. ಮೋದಿಯವರೇ ಕಾರ್ಮಿಕರನ್ನು ಅಸಹಾಯಕರು ಎಂದು ಪರಿಗಣಿಸಬೇಡಿ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.