ಭಾರತದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಾಯ ಬಂದೊದಗಿದ್ದು, ದೇಶ ನಿರಂಕುಶ ಪ್ರಭುತ್ವದತ್ತ ಸಾಗುತ್ತಿದೆ‘ ಎಂದು ಕಳವಳ ವ್ಯಕ್ತಪಡಿಸಿ ಎಂಟು ವಿರೋಧ ಪಕ್ಷಗಳು ಪ್ರಧಾನಿಗೆ ಪತ್ರ ಬರೆದ ವಿಷಯ ನಮ್ಮಲ್ಲಿ, ಪ್ರಮುಖ ಇಂಗ್ಲಿಷ್ ಪತ್ರಿಕೆಗಳಲ್ಲಿ ಲೀಡ್ ಆಗಿದೆ. ಕೆಲವು ಕನ್ನಡ ಪತ್ರಿಕೆಗಳೂ ಈ ಸುದ್ದಿಗೆ ಮುಖಪಟದಲ್ಲಿ ಆದ್ಯತೆ ನೀಡಿವೆ.
* ಲಂಚ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇನ್ನೂ ಪತ್ತೆಯಾಗಿಲ್ಲ ಎಂಬ ವರದಿಯ ಫಾಲೊಅಪ್ ನಮ್ಮಲ್ಲಿದೆ. ಅವರು ಪತ್ತೆಯಾಗದ ಕಾರಣ ಲೋಕಾಯುಕ್ತ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದಾರೆ ಎಂಬುದನ್ನು ವಿ.ಕ., ಉದಯವಾಣಿ ಹೈಲೈಟ್ ಮಾಡಿವೆ. ಆದರೆ ಈ ರೀತಿಯ ಬೆಳವಣಿಗೆ ನಡೆದಿಲ್ಲ ಎನ್ನುವ ಕಾರಣ ನಮ್ಮಲ್ಲಿ ಆ ಅಂಶ ಬರೆದಿಲ್ಲ. ಅವರ ಹಿರಿಯ ಮಗ ಮಲ್ಲಿಕಾರ್ಜುನ ಮಾಡಾಳ್ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂಬ ಮಾಹಿತಿ ವಿಜಯ ಕರ್ನಾಟಕದಲ್ಲಿದೆ. ಇದು ನಮ್ಮಲ್ಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.