ADVERTISEMENT

Test 1 text 4th Mar 2023 - ಬಹುನಿರೀಕ್ಷಿತ ಐಷಾರಾಮಿ Garmin testing

Sub: ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಬೆಂಬಲಿಸುವ ಈ Garmin Forerunner 965 ಸ್ಮಾರ್ಟ್‌ವಾಚ್ 23 ದಿನಗಳ ಬ್ಯಾಟರಿ ಅವಧಿ ಹೊಂದಿದೆ. Forerunner 965 ನ

Raja K
Published 18 ಏಪ್ರಿಲ್ 2023, 10:35 IST
Last Updated 18 ಏಪ್ರಿಲ್ 2023, 10:35 IST
caption test text
caption test text   Attribution text.

ಪ್ರೀಮಿಯಂ ಸ್ಮಾರ್ಟ್‌ವಾಚ್‌ಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುರುವ ಜನಪ್ರಿಯ ವೇರಿಯಬಲ್ ಬ್ರ್ಯಾಂಡ್ Garmin ಮಾರುಕಟ್ಟೆಗೆ ತನ್ನ ಬಹುನಿರೀಕ್ಷಿತ Forerunner 965 ಸ್ಮಾರ್ಟ್‌ವಾಚ್ ಬಿಡುಗಡೆಗೊಳಿಸಿದೆ. ಬಿಡುಗಡೆಗೂ ಮುನ್ನವೇ ಐಷಾರಾಮಿ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ಗಳ ವದಂತಿಯ ಸುದ್ದಿಗಳ ಮೂಲಕ ಸದ್ದು ಮಾಡಿದ್ದ ಈ ಹೊಸ Forerunner 965 ಸ್ಮಾರ್ಟ್‌ವಾಚ್ ಮಾರುಕಟ್ಟೆಯ ನಿರೀಕ್ಷೆಯನ್ನು ಉಳಿಸಿಕೊಂಡಿದ್ದು, ಗ್ರೇಡ್ -5 ಟೈಟಾನಿಯಂನೊಂದಿಗೆ ನಿರ್ಮಿಸಲಾದ ಐಷಾರಾಮಿ ವಿನ್ಯಾಸ ಹಾಗೂ 46 ಎಂಎಂ ಚಾಸಿಸ್ ಮತ್ತು 1.4 ಇಂಚಿನ ಅಮೋಲೆಡ್ ಡಿಸ್‌ಪ್ಲೇ, 23 ದಿನಗಳ ಬ್ಯಾಟರಿ ಅವಧಿಯಂತಹ ವೈಶಿಷ್ಟ್ಯಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೆ, ನೂತನ Garmin Forerunner 965 ಸ್ಮಾರ್ಟ್‌ವಾಚ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

ಹೇಗಿದೆ Garmin Forerunner 965 ಸ್ಮಾರ್ಟ್‌ವಾಚ್?

ಮಾರುಕಟ್ಟೆಯಲ್ಲಿ ಬಹುನಿರೀಕ್ಷೆ ಮೂಡಿಸಿದ್ದ ನೂತನ Garmin Forerunner 965 ಸ್ಮಾರ್ಟ್‌ವಾಚ್ ಗ್ರೇಡ್ -5 ಟೈಟಾನಿಯಂನೊಂದಿಗೆ ನಿರ್ಮಿಸಲಾದ ಐಷಾರಾಮಿ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. ಸ್ಟೇನ್‌ಲೆಸ್ ಸ್ಟೀಲ್‌ಗೆ ಹೋಲಿಸಿದರೆ ಸಾಕಷ್ಟು ಹಗುರವಾಗಿರುವ ಈ ಸ್ಮಾರ್ಟ್‌ವಾಚ್‌ನಲ್ಲಿ 46 ಎಂಎಂ ಚಾಸಿಸ್ ಅಳವಡಿಸಲಾಗಿದ್ದು, ನೋಡಲು ಪ್ರೀಮಿಯಂ ಲುಕ್ ಹೊಂದಿರುವುದು ಹೊರಭಾಗದಿಂದಲೇ ಕಾಣಿಸುತ್ತದೆ. ಈ ಸ್ಮಾರ್ಟ್‌ವಾಚ್ ಗುಣಮಟ್ಟದಂತೆಯೇ, ಇದರಲ್ಲಿನ ವೈಶಿಷ್ಟ್ಯಗಳು ಸಹ ಪ್ರೀಮಿಯಂ ಆಗಿದ್ದು, ಇದು 1.4 ಇಂಚಿನ ಅಮೋಲೆಡ್ ಆಲ್‌ವೇಸ್ ಆನ್ ಡಿಸ್‌ಪ್ಲೇ ಹೊಂದಿದೆ. 454 x 454 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ ಈ ಡಿಸ್‌ಪ್ಲೇಯು ಈ ಹಿಂದಿನ ಮಾದರಿಗಳಲ್ಲಿನ MIP ಡಿಸ್‌ಪ್ಲೇಗಳಿಗಿಂತ ಹೆಚ್ಚು ಪ್ರಕಾಶಮಾನವಾಗಿದೆ ಮತ್ತು ಹೆಚ್ಚು ಎದ್ದುಕಾಣುವಂತಿದೆ.

ADVERTISEMENT

Forerunner 965 ಸ್ಮಾರ್ಟ್‌ವಾಚ್ ಜಾಗತಿಕ ಮಾರುಕಟ್ಟೆಯಲ್ಲಿ $599.99 (ಅಂದಾಜು 49,077 ರೂ) ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಹಲವು ಬ್ಯಾಂಡ್ ಬಣ್ಣಗಳ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬಂದಿದೆ. ಇದು ದೇಶದ ಮಾರುಕಟ್ಟೆಗೆ ಶೀಘ್ರವೇ ಆಗಮನವಾಗುವ ನಿರೀಕ್ಷೆ ಇದೆ.!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.