ADVERTISEMENT

Test 4 24 Feb 2023-Bengaluru Water Supply Cut: ಬೆಂಗಳೂರಿನ 100ಕ್ಕೂ ಹೆಚ್ಚು ಪ್ರದೇಶದಲ್ಲಿ ಭಾನುವಾರ ನೀರು ಪೂ

ಬೆಂಗಳೂರಿನ 100ಕ್ಕೂ

Raja K
Published 24 ಫೆಬ್ರುವರಿ 2023, 5:50 IST
Last Updated 24 ಫೆಬ್ರುವರಿ 2023, 5:50 IST
Test caption: ಇಲ್ಲಿದೆ ಪಟ್ಟಿ
Test caption: ಇಲ್ಲಿದೆ ಪಟ್ಟಿ   Test attrib:ಇರಲ್ಲ!

Disruption in Bengaluru Water Supply: ಫೆಬ್ರವರಿ 26ಕ್ಕೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಭಾನುವಾರ ಬೆಳಗ್ಗೆ 6 ರಿಂದ ಸಂಜೆ 6ರವರೆಗೂ ಅಂದರೆ ಸುಮಾರು 12 ಗಂಟೆಗಳ ಕಾಲ ಎಂಜಿ ರೋಡ್‌, ಬ್ರಿಗೇಡ್‌ ರೋಡ್‌, ಶಾಂತಿನಗರ ಸೇರಿ ಅನೇಕ ಕಡೆ ನೀರು ಸರಬರಾಜು ಆಗುವುದಿಲ್ಲ. ಜಲಮಂಡಳಿಯ ಕಾವೇರಿ 1ನೇ ಹಂತದಲ್ಲಿ ನೀರಿನ ಕೊಳವೆಗಳ ಉನ್ನತೀಕರಣದ ಕಾಮಗಾರಿಯಿಂದ ನೀರು ಪೂರೈಕೆಯಲ್ಲಿ ಸಮಸ್ಯೆ ಆಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ತಿಳಿಸಿದೆ.

ನೇತಾಜಿ ನಗರ, ನಾಗಮ್ಮ ನಗರ, ಕೇಶವ ನಗರ, ಕೆಪಿ ಅಗ್ರಹಾರ, ರಾಘವೇಂದ್ರ ಕಾಲೊನಿ, ಟಿಪ್ಪು ನಗರ, ಆನಂದಪುರ, ಚಾಮರಾಜಪೇಟೆ, ರಾಮಚಂದ್ರ ಅಗ್ರಹಾರ, ಆದರ್ಶ ನಗರ, ಕನ್ನೀರ್‌ ಕಾಲೊನಿ, ನಂಜಾಂಬ ಅಗ್ರಹಾರ, ವಾಲ್ಮೀಕಿ ನಗರ, ವಿಎಸ್ ಗಾರ್ಡನ್‌, ಹರಿಕುಂಟೆ, ಪಾದರಾಯನಪುರ ಫ್ಲವರ್‌ ಗಾರ್ಡನ್‌, ಆಂಜನಪ್ಪ ಗಾರ್ಡನ್‌, ಬಿನ್ನಿ ಲೇಔಟ್‌, ನ್ಯೂ ಬಿನ್ನಿ ಲೇಔಟ್‌, ವಿದ್ಯಾಪೀಠ, ಶ್ರೀನಿವಾಸ ನಗರ, ಬ್ಯಾಂಕ್‌ ಕಾಲೊನಿ, ಪಿಟಿಐ ಲೇಔಟ್‌, ಗುರುರಾಜ್‌ ಲೇಔಟ್‌, ವಿವೇಕಾನಂದ ನಗರ, ಖಾದಿ ಮಿಷನ್‌ ಲೇಔಟ್‌, ಕತ್ರಿಗುಪ್ಪೆ, ತ್ಯಾಗರಾಜನಗರ, ಬಸವನಗುಡಿ ಪ್ರದೇಶದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.

ಕೋರಮಂಗಲ 6, 7ನೇ ಬ್ಲಾಕ್‌, ಕೆ.ಆರ್‌. ಗಾರ್ಡನ್‌, ಕೆ.ಎಚ್‌.ಬಿ. ಕಾಲೊನಿ, ಜಾನ್‌ ನಗರ, ಕೋರಮಂಗಲ ವಿಲೇಜ್‌, ಕೋರಮಂಗಲ 8ನೇ ಬ್ಲಾಕ್‌, ಜಯನಗರ 3,4 ಹಾಗೂ 4ನೇ ಟಿ ಬ್ಲಾಕ್‌, ತಿಲಕ್‌ ಎಸ್‌.ಆರ್‌. ನಗರ, ಚಂದ್ರಪ್ಪ ನಗರ, ಈರಮ್ಮ ಲೇಔಟ್‌ ಮತ್ತು ಆಡುಗೋಡಿ, ವೆಂಕಟೇಶ್ವರ ಲೇಔಟ್‌, ಎಸ್‌.ಜಿ. ಪಾಳ್ಯ, ಭುವನಪ್ಪ ಲೇಔಟ್‌, ಕಾವೇರಿ ಲೇಔಟ್‌, ಜೋಗಿ ಕಾಲೋನಿ, ಸೇಂಟ್‌ವುಡ್‌ ಅಪಾರ್ಟ್‌ಮೆಂಟ್‌, ಚಿಕ್ಕ ಆಡುಗೋಡಿ, ಬೃಂದಾವನ ನಗರ, ಸೇಂಟ್‌ ಜಾನ್ಸ್‌ ಕ್ವಾರ್ಟರ್ಸ್‌, ಮಾರುತಿ ನಗರ, ವಿ.ಪಿ. ರಸ್ತೆ, ಎ.ಕೆ. ಕಾಲೋನಿ, ಭೋವಿ ಕಾಲೊನಿ ಕಲ್ಲಹಳ್ಳಿ, ಕದಿರಯ್ಯನಪಾಳ್ಯ, ಲಕ್ಷ್ಮೀ ಪುರ, ಜಯರಾಜನಗರ, ಜೀವನ್‌ಬಿಮಾನಗರ, ಜೋಗುಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ADVERTISEMENT

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.