ರೆಸ್ಟೋರೆಂಟ್ ಸ್ಟೈಲ್ ಚಿಕನ್ ಗ್ರೇವಿ
ಬೇಕಾಗುವ ಸಾಮಗ್ರಿಗಳು: ಚಿಕನ್ - ಅರ್ಧ ಕೆಜಿ, ಕೆಂಪು ಮೆಣಸಿನಕಾಯಿ - 8, ಈರುಳ್ಳಿ - 2, ಟೊಮೆಟೊ – 2, ಗೋಡಂಬಿ - 2 ಟೇಬಲ್ ಚಮಚ, ಅರಿಸಿನ – ಕಾಲು ಚಮಚ, ಎಣ್ಣೆ – 2 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿ ಪುಡಿ – 1 ಚಮಚ, ಗರಂಮಸಾಲ – 1 ಚಮಚ, ಕಸೂರಿ ಮೇಥಿ – 1 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ
ತಯಾರಿಸುವ ವಿಧಾನ: ಮಸಾಲೆ ಮಾಡಲು ನೆನೆಸಿದ ಒಣಮೆಣಸಿನಕಾಯಿಮ ಟೊಮೆಟೊ ಮತ್ತು ಗೋಡಂಬಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಯನ್ನು ಬಿಸಿಗೆ ಇಟ್ಟು 2 ಟೇಬಲ್ ಚಮಚ ಎಣ್ಣೆ ಹಾಕಿ ಈರುಳ್ಳಿಯನ್ನು ಬಾಡಿಸಿಕೊಳ್ಳಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಬಾಡಿಸಿಕೊಳ್ಳಿ. ನಂತರ ತೊಳೆದಿಟ್ಟ ಚಿಕನ್ ಸೇರಿಸಿ ಅದಕ್ಕೆ ಅರಿಸಿನ, ಉಪ್ಪು, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ. ಚಿಕನ್ ಅರ್ಧ ಬೇಯುವವರೆಗೂ ಎಣ್ಣೆಯಲ್ಲಿ ಫ್ರೈ ಮಾಡಿ. ಈಗ ರುಬ್ಬಿದ ಮಸಾಲೆಯನ್ನು ಸೇರಿಸಿ ಎಣ್ಣೆ ಬಿಡುವವರೆಗೂ ಬೇಯಿಸಿ. ಕೊನೆಯಲ್ಲಿ ಗರಂಮಸಾಲೆ, ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು ಹಾಗೂ ಅರ್ಧ ಲೋಟ ನೀರು ಸೇರಿಸಿ. ಐದು ನಿಮಿಷ ಕುದಿಸಿಕೊಂಡರೆ ರೆಸ್ಟೋರೆಂಟ್ ಸ್ಟೈಲ್ ಚಿಕನ್ ಗ್ರೇವಿ ಚಪಾತಿಯೊಂದಿಗೆ ಸವಿಯಲು ಸಿದ್ಧ.
ಚೆಟ್ಟಿನಾಡ್ ಚಿಕನ್ ಮಸಾಲ
ಬೇಕಾಗುವ ಸಾಮಗ್ರಿಗಳು: ಮಸಾಲೆ ಪೌಡರ್‌ಗೆ– ಒಂದು ಇಂಚು ಚಕ್ಕೆ, ಲವಂಗ – 5, ಏಲಕ್ಕಿ – 3, ಅನಾನಸ್ ಹೂವು – 1, ಪಲಾವ್ ಎಲೆ – 2, ಒಣಮೆಣಸಿನಕಾಯಿ ಕಾಯಿ – 3, ಕಾಳುಮೆಣಸು – 1 ಚಮಚ, ಜೀರಿಗೆ – 1 ಚಮಚ, ಸೋಂಪು – 1 ಚಮಚ, ಕೊತ್ತಂಬರಿ – 1 ಚಮಚ, ಒಣ ಕೊಬ್ಬರಿ – ಸ್ವಲ್ಪ. (ಈ ಎಲ್ಲಾ ಸಾಮಗ್ರಿಗಳನ್ನು ಹುರಿದು ಪುಡಿ ಮಾಡಿಕೊಳ್ಳಿ)
ತಯಾರಿಸುವ ವಿಧಾನ: ಒಂದು ಕುಕರ್ ಬಿಸಿಗಿಟ್ಟು ಅದಕ್ಕೆ 2 ಟೇಬಲ್ ಚಮಚ ಎಣ್ಣೆ ಹಾಕಿ ಕರಿಬೇವು, ಎರಡು ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಇದಕ್ಕೆ ಚಿಕನ್, ಸ್ವಲ್ಪ ಅರಿಸಿನ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಅಚ್ಚ ಖಾರದ ಪುಡಿ ಹಾಕಿ ಹುರಿದುಕೊಳ್ಳಿ. ನಂತರ ಎರಡೂ ಟೊಮೆಟೊ ಹಣ್ಣನ್ನು ರುಬ್ಬಿ ಸೇರಿಸಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ತಯಾರಿಸಿದ ಚೆಟ್ಟಿನಾಡು ಮಸಾಲಾ ಪೌಡರ್ ಸೇರಿಸಿ, ನೀರು ಹಾಕಿ ಒಂದು ಕೂಗು ಕೂಗಿಸಿಕೊಂಡರೆ ಚೆಟ್ಟಿನಾಡ್ ಚಿಕನ್ ಮಸಾಲ ಚಪಾತಿಯೊಂದಿಗೆ ಸವಿಯಲು ಸಿದ್ಧ.
(ಲೇಖಕಿ: ಹೇಮಾಸ್ ಕುಕಿಂಗ್ ಯೂಟ್ಯೂಬ್ ಚಾನೆಲ್ ನಿರ್ವಾಹಕಿ)
ಮಸಾಲೆ ಮಾಡಲು ನೆನೆಸಿದ ಒಣಮೆಣಸಿನಕಾಯಿಮ ಟೊಮೆಟೊ ಮತ್ತು ಗೋಡಂಬಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.