ಹೆಬ್ರಿ: ಇಲ್ಲಿನ ದೇವಾಡಿಗ ಸುಧಾರಕ ಸಂಘದ ವತಿಯಿಂದ 14ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ, ಸನ್ಮಾನ ಮತ್ತು ಆಯುಷ್ಮಾನ್ ಕಾರ್ಡ್ ವಿತರಣೆ ಈಚೆಗೆ ಸಮಾರಂಭ ಸಂಘದ ಸಮುದಾಯ ಭವನದಲ್ಲಿ ನಡೆಯಿತು.
ನಾಗರಾಜ ಜೋಯಿಸ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಬಾರ್ಕೂರು ವಿಶ್ವ ದೇವಾಡಿಗರ ಮಹಾಮಂಡಳಿಯ ಕೋಶಾಧಿಕಾರಿ ಡಾ.ಸುಂದರ ಮೊಯಿಲಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ದೇವಾಡಿಗ ಸುಧಾರಕ ಸಂಘದ ಅಧ್ಯಕ್ಷ ಶಂಕರ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಚಾರದ ನಂದಿನಿ, ಡಾ.ಕೆ. ಪ್ರಜ್ವಲ್ ಕುಮಾರ್, ಐಶ್ವರ್ಯ ಹೆಬ್ರಿ ದೇವಸ್ಥಾನಬೆಟ್ಟು, ಚಾರ ಹಂದಿಕಲ್ಲು ಅಮೃತಾ ಅವರನ್ನು ಸನ್ಮಾನಿಸಲಾಯಿತುP2.
ವಂಡ್ಸೆ ರಮೇಶ ದೇವಾಡಿಗ, ಶಿವಾನಂದ ಮೊಯಿಲಿ, ಸದಾನಂದ ಮೊಯಿಲಿ ಮಂಗಳೂರು, ಸದಾನಂದ ಸೇರಿಗಾರ್ ಕಾವೂರು, ರವಿ ದೇವಾಡಿಗ ತಲ್ಲೂರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುರಂದರ್ ಎಸ್P3.
ಗಣೇಶ್ ಉಡುಪಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಉಮೇಶ್, ದೇವಾಡಿಗ ಸುಧಾರಕ ಸಂಘದ ಸ್ಥಾಪಕ ಅಧ್ಯಕ್ಷ ಸದಾನಂದ ಮೊಯಿಲಿ, ಪದಾಧಿಕಾರಿಗಳು, ಪ್ರಮೀಳಾ ರಘುರಾಮ ದೇವಾಡಿಗ, ಪ್ರಾಯೋಜಕರಾದ ಪ್ರೇಮಾನಾರಾಯಣ ದೇವಾಡಿಗ, ಸರಸ್ವತಿ ಕೃಷ್ಣ.
ಕುಸುಮಾ ಅನಿಲ್ ಕುಮಾರ್, ರೀನಾ ದಯಾನಂದ್, ಗೀತಾ ಪುರಂದರ್ ಇದ್ದರು. ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ಎಚ್. ಜನಾರ್ಧನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾ ಜನಾರ್ದನ್ ನಿರೂಪಿಸಿದರು. ಪ್ರತಿಮಾ ಉಪ್ಪಳ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.