ನಟ ಸತೀಶ್ ನೀನಾಸಂ ಈಗಾಗಲೇ ದಸರಾ, ಮ್ಯಾಟ್ನಿ, ಅಶೋಕ ಬ್ಲೇಡ್ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗ ಮತ್ತೊಂದು ಸಿಹಿ ಸುದ್ದಿ ಅವರ ಅಡ್ಡದಿಂದ ಹೊರಬಿದ್ದಿದೆ. ಅವರೀಗ ಖ್ಯಾತ ನಿರ್ದೇಶಕ 'ದುನಿಯಾ' ಸೂರಿ ಅವರ ತಂಡದ ಜತೆ ಕೆಲಸ ಮಾಡಲಿದ್ದಾರೆ. ನಿರ್ದೇಶಕ 'ದುನಿಯಾ' ಸೂರಿ ಸದ್ಯ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಸತೀಶ್ ಅವರನ್ನು ಭೇಟಿಯಾಗಿದ್ದು, ಗಂಟೆಗಟ್ಟಲೆ ಸಿನಿಮಾ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಮಯದಲ್ಲಿ ಹೊಸ ಸಿನಿಮಾದ ಬಗ್ಗೆಯೂ ಚರ್ಚೆ ನಡೆದಿದೆ. ಸೂರಿ ನಿರ್ದೇಶನದ ಕೆಲ ಸಿನಿಮಾಗಳಲ್ಲಿ ಸತೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಸೋಲೋ ಹೀರೋ ಆಗಿ ಕಾಣಿಸಿಕೊಂಡಿಲ್ಲ. ಹಾಗಾಗಿ ಸತೀಶ್‌ಗಾಗಿಯೇ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕು ಎನ್ನುವ ಮಾತುಗಳನ್ನು ಈ ಹಿಂದೆ ಸೂರಿ ಆಡಿದ್ದರು. ಆದರೆ, ಈ ಬಾರಿ ತಮ್ಮ ಶಿಷ್ಯ ಸುರೇಶ್ ಎನ್ನುವವರಿಂದ ಸಿನಿಮಾವನ್ನು ನಿರ್ದೇಶನ ಮಾಡಿಸುತ್ತಿದ್ದಾರೆ. ಇದಕ್ಕೆ ಸೂರಿ ಅವರೇ ಮಾರ್ಗದರ್ಶಕರಾಗಿ ನಿಲ್ಲಲಿದ್ದಾರಂತೆ. ಸುರೇಶ್ ಹತ್ತಾರು ವರ್ಷಗಳ ಕಾಲ ಸೂರಿ ಅವರೊಂದಿಗೆ ಕೆಲಸ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.