WhatsApp ಮೂಲಕ ಕಳುಹಿಸಲಾದ ಸಂದೇಶಗಳನ್ನು ಎಡಿಟ್ (Edit Feature) ಮಾಡಬಹುದಾದ ಅಚ್ಚರಿಯ ವೈಶಿಷ್ಟ್ಯವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಇತ್ತೀಚಿಗಷ್ಟೇ ವರದಿಯಾಗಿತ್ತು. ಇದೀಗ ಈ ಬಗ್ಗೆ ಮತ್ತಷ್ಟು ಅಪ್‌ಡೇಟ್ಸ್ ದೊರೆತಿದೆ. WhatsApp ಬಳಕೆದಾರರು ಕಳುಹಿಸಿದ ಸಂದೇಶಗಳನ್ನು ಎಡಿಟ್ ಮಾಡಲು ಸಾಧ್ಯವಾಗಲಿರುವ ವೈಶಿಷ್ಟ್ಯದ ಸ್ಕ್ರೀನ್‌ಶಾಟ್ ಒಂದನ್ನು WhatsApp ಬೀಟಾ ಟ್ರ್ಯಾಕರ್ WABetaInfo ಪ್ರಕಟಿಸಿದ್ದು, ಇದರಲ್ಲಿ ಬಳಕೆದಾರರು ಕಳುಹಿಸಿದ WhatsApp ಸಂದೇಶವನ್ನು ಲಾಂಗ್ ಪ್ರೆಸ್ ಮೂಲಕ ಆಯ್ಕೆ ಮಾಡಿದಾಗ, ಸಂದೇಶವನ್ನು ನಕಲಿಸು(ಕಾಪಿ), ಫಾರ್ವರ್ಡ್ ಆಯ್ಕೆಯೊಂದಿಗೆ ಎಡಿಟ್ ಆಯ್ಕೆ ಗೋಚರಿಸಿದೆ. ಇದು ಕಳುಹಿಸಲಾದ ಸಂದೇಶದಲ್ಲಿ ಅಕ್ಷರ ದೋಷವಿದ್ದರೆ ಅದನ್ನು ಸರಿಪಡಿಸಲು ಅನುಮತಿಸಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.