ADVERTISEMENT

ಡೇರ್‌ಡೆವಿಲ್ ಮುಸ್ತಫಾ: ’ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ’ ಹಾಡು ಕೇಳಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 6:44 IST
Last Updated 10 ಅಕ್ಟೋಬರ್ 2021, 6:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ಡೇರ್‌ಡೆವಿಲ್ ಮುಸ್ತಫಾ’ ಚಿತ್ರತಂಡ ದಸರಾ ಹಬ್ಬದ ಅಂಗವಾಗಿ  'ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ' ಎಂಬ ಹಾಡನ್ನು ಬಿಡುಗಡೆ ಮಾಡಿದ್ದು ಈ ಹಾಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಹಾಡುಗಳು ಹಾಗೂ ಪೋಸ್ಟರ್‌ಗಳ ಮೂಲಕ ಈ ಸಿನಿಮಾ ಗಮನ ಸೆಳೆಯುತ್ತಿದೆ.'ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ' ಹಾಡನ್ನು ಅನಿಮೇಶನ್‌ ಮೂಲಕ ಚಿತ್ರಿಸಲಾಗಿದೆ. ’ಮೈಸೂರು ದೊರೆಯೆ ರಣಧೀರ ನಾಯ್ಕನೆ' ಎಂದು ಆರಂಭವಾಗುವ ಈ ಹಾಡು ರಂಗಗೀತೆ ಶೈಲಿಯಲ್ಲಿದೆ. ಡಾ.ರಾಜ್‌ಕುಮಾರ್ ಅವರನ್ನು ರಣಧೀರ ನಾಯ್ಕನಂತೆ ಚಿತ್ರಿಸಲಾಗಿದೆ.

ಸುಮಾರು 40 ವರ್ಷಗಳ ಹಿಂದೆ ಬೆಂಗಳೂರು ಸಮುದಾಯ ರಂಗತಂಡವು 'ಹುತ್ತವ ಬಡಿದರೆ' ನಾಟಕದಲ್ಲಿ ಈ ಹಾಡನ್ನು ಅಳವಡಿಸಿಕೊಳ್ಳಲಾಗಿತ್ತು. ಡಾ.ಸಿ ವೀರಣ್ಣ ರಚಿಸಿದ ಈ ಹಾಡಿಗೆ ಬಿ.ವಿ.ಕಾರಂತರು ಸಂಗೀತ ನೀಡಿದ್ದರು. ಪ್ರಸ್ತುತ ಈ ಹಾಡನ್ನು ವಾಸುಕಿ ವೈಭವ್ ಹಾಡಿದ್ದು, ನವನೀತ್ ಶ್ಯಾಮ್ ರಾಗಸಂಯೋಜನೆ ಮಾಡಿದ್ದಾರೆ. 

ADVERTISEMENT

ಪೂರ್ಣಚಂದ್ರ ತೇಜಸ್ವಿ ರಚಿತ 'ಡೇರ್‌ಡೆವಿಲ್ ಮುಸ್ತಫಾ' ಕತೆಯನ್ನು ಓದುಗರೇ ಸಿನಿಮಾ ಮಾಡುತ್ತಿರುವುದು ವಿಶೇಷ. ಶಶಾಂಕ್ ಸೋಗಲ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್,  ಪ್ರೇರಣಾ, ಉಮೇಶ್, ಮಂಡ್ಯ ರಮೇಶ್, ಮೈಸೂರು ಆನಂದ್ ಸೇರಿದಂತೆ ಹಲವರು ನಟಿಸಿದ್ದಾರೆ.

ಸಾರಾಂಶ

‘ಡೇರ್‌ಡೆವಿಲ್ ಮುಸ್ತಫಾ’ ಚಿತ್ರತಂಡ ದಸರಾ ಹಬ್ಬದ ಅಂಗವಾಗಿ  'ನಿನ್ನಂಥೋರ್ ಯಾರೂ ಇಲ್ವಲ್ಲೊ ಲೋಕದ ಮ್ಯಾಲೆ' ಎಂಬ ಹಾಡನ್ನು ಬಿಡುಗಡೆ ಮಾಡಿದ್ದು ಈ ಹಾಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.