ADVERTISEMENT

ಶಾರುಕ್ ಖಾನ್ ನಿರ್ಮಾಣದ‌ ಕ್ರ್ಯೆಂ ಥ್ರಿಲ್ಲರ್ ಸಿನಿಮಾದಲ್ಲಿ ಭೂಮಿ ಫಡ್ನೇಕರ್

ಪ್ರಜಾವಾ‌ಣಿ ವೆಬ್ ಡೆಸ್ಕ್‌
Published 13 ಅಕ್ಟೋಬರ್ 2021, 14:35 IST
Last Updated 13 ಅಕ್ಟೋಬರ್ 2021, 14:35 IST
ಭೂಮಿ ಫಡ್ನೇಕರ್
ಭೂಮಿ ಫಡ್ನೇಕರ್   

ಬೆಂಗಳೂರು; ನಟ ಶಾರುಕ್ ಖಾನ್ ಅವರು ತಮ್ಮ ಮಗ ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿಕೊಂಡಿರುವುದರಿಂದ ಚಿಂತಾಕ್ರಾಂತರಾಗಿದ್ದಾರೆ ಎಂಬ ವರದಿಗಳು ಬಂದಿದ್ದು, ಏತನ್ಮಧ್ಯೆ ಅವರು ತಮ್ಮ ಮುಂದಿನ ಸಿನಿಮಾ ನಿರ್ಮಾಣದ ವಿಷಯದಲ್ಲಿಯೂ ಗಮನ ಹರಿಸಿದ್ದಾರೆ.

ಶಾರುಕ್ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್’ ಕಂಪನಿ ನಿರ್ಮಿಸುತ್ತಿರುವ ಕ್ರೈಂ ಥ್ರಿಲ್ಲರ್ ಸಿನಿಮಾ ‘ಭಕ್ಸಕ್’ ಸೆಟ್ಟೆರಲು ಸಜ್ಜಾಗಿದೆ. ನಾಯಕಿ ಪ್ರಧಾನ ಕಥೆ ಹೊಂದಿರುವ ‘ಭಕ್ಸಕ್’ ನಲ್ಲಿ ಬಾಲಿವುಡ್ ನಟಿ ಭೂಮಿ ಫಡ್ನೇಕರ್ ನಾಯಕಿ ಪಾತ್ರಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. 

ಈ ಚಿತ್ರದಲ್ಲಿ ಭೂಮಿ ಫಡ್ನೇಕರ್ ತನಿಖಾ ವರದಿ ಮಾಡುವ ಪತ್ರಕರ್ತೆ ಪಾತ್ರ ನಿಭಾಯಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಿನಿಮಾವನ್ನು ‘ಬೋಸ್:ಡೆಡ್ ಆರ್ ಅಲೈವ್’ ನಿರ್ದೇಶಿಸಿದ್ದ ಪುಲ್ಕಿತ್ ಅವರು ನಿರ್ದೇಶಿಸಲಿದ್ದಾರೆ.

ADVERTISEMENT

ಭಕ್ಸಕ್ 2022 ರಿಂದ ಚಿತ್ರೀಕರಣ ಆರಂಭಿಸಲಿದ್ದು, ನಟ ಅರ್ಜುನ್ ಕಪೂರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಬಿಹಾರದಲ್ಲಿ ಬಾಲಕಿಯರನ್ನು ಅಪಹರಿಸಿ ಅವರನ್ನು ವೇಶ್ಯಾವೃತ್ತಿಗೆ ತಳ್ಳುವ ಕಥಾ ಹಂದರವನ್ನು ಭಕ್ಸಕ್ ಹೊಂದಿದೆ.

ಇನ್ನು ಭೂಮಿ ಫಡ್ನೇಕರ್ ಹಾಗೂ ಅವರ ತಂಗಿ ನಟಿ ಸಮೀಕ್ಷಾ ಪಡ್ನೇಕರ ಇತ್ತೀಚೆಗೆ ಸ್ಪೇನ್ ನಲ್ಲಿ ನಡೆಸಿದ ಹಾಟ್ ಫೋಟೊ ಶೂಟ್ ವೈರಲ್ ಆಗಿವೆ.

ಸಾರಾಂಶ

ಶಾರುಕ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಕಂಪನಿ ನಿರ್ಮಿಸುತ್ತಿರುವ ಕ್ರೈಂ ಥ್ರಿಲ್ಲರ್ ಸಿನಿಮಾವ ಭಕ್ಸಕ್ ಸೆಟ್ಟೆರಲು ಸಜ್ಜಾಗಿದೆ. ನಾಯಕಿ ಪ್ರಧಾನ ಕಥೆ ಹೊಂದಿರುವ ಭಕ್ಸಕ್ ನಲ್ಲಿ ಬಾಲಿವುಡ್ ನಟಿ ಭೂಮಿ ಫಡ್ನೇಕರ್ ನಾಯಕಿ ಪಾತ್ರಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.