ADVERTISEMENT

ತಮಿಳು ನಟ ಶ್ರೀಕಾಂತ್‌ ನಿಧನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 8:53 IST
Last Updated 13 ಅಕ್ಟೋಬರ್ 2021, 8:53 IST
ಶ್ರೀಕಾಂತ್‌ (ಚಿತ್ರಕೃಪೆ: ಸಿನಿಪಟೈ ಇನ್‌ಸ್ಟಾಗ್ರಾಂ)
ಶ್ರೀಕಾಂತ್‌ (ಚಿತ್ರಕೃಪೆ: ಸಿನಿಪಟೈ ಇನ್‌ಸ್ಟಾಗ್ರಾಂ)   

ಚೆನ್ನೈ: ತಮಿಳಿನ ಹಿರಿಯ ನಟ ಶ್ರೀಕಾಂತ್ ಮಂಗಳವಾರ ತಡ ರಾತ್ರಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. 

1965ರಲ್ಲಿ ತೆರೆಕಂಡ ಜಯಲಲಿತಾ ಅಭಿನಯದ 'ವೆನ್ನಿರ ಆಡೈ’ ಸಿನಿಮಾದಲ್ಲಿ ಶ್ರೀಕಾಂತ್‌ ಮೊದಲ ಬಾರಿಗೆ ನಟಿಸಿದ್ದರು. 4 ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ ಅವರು ಸಕ್ರಿಯರಾಗಿದ್ದರು.

ನಾಯಕ, ಖಳ ನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆಗಿನ ಕಾಲಘಟದಲ್ಲೇ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು.

ADVERTISEMENT

ಹಿರಿಯ ನಟರಾದ ಶಿವಾಜಿ ಗಣೇಶನ್, ರಜನಿಕಾಂತ್‌, ಕಮಲ್‌ ಹಾಸನ್‌ ಅವರ ಜೊತೆ ಕೂಡ ನಟಿಸಿದ್ದರು. 

ನಟ ರಜನಿಕಾಂತ್‌ ಸೇರಿದಂತೆ ತಮಿಳು ಸಿನಿಮಾರಂಗದ ಗಣ್ಯರು ಶ್ರೀಕಾಂತ್‌ ನಿಧನಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪಗಳನ್ನು ಸೂಚಿಸಿದ್ದಾರೆ.

ಸಾರಾಂಶ

ತಮಿಳಿನ ಹಿರಿಯ ನಟ ಶ್ರೀಕಾಂತ್ ಮಂಗಳವಾರ ತಡ ರಾತ್ರಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.