ಭಾಗ– 76
1041. ಸಿಐಎಸ್‌ಎಫ್ ವಿಸ್ತಾರ ರೂಪ ಯಾವುದು?
ಎ) ಸೆಂಟ್ರಲ್ ಇಂಡಸ್ಟ್ರಿಯಲ್ ಸರೆಂಡರ್ ಫೋರ್ಸ್
ಬಿ) ಸೆಂಟ್ರಲ್ ಇಂಟೆಲಿಜೆನ್ಸ್ ಸೆಕ್ಯುರಿಟಿ ಫೋರ್ಸ್
ಸಿ) ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್
ಡಿ) ಸೆಂಟ್ರಲ್ ಇಮಿಗ್ರೇಷನ್ ಸೆಕ್ಯುರಿಟಿ ಫೋರ್ಸ್
1042. ಪ್ರತಿಷ್ಠಿತ ‘ಬೂಕರ್’ ಬಹುಮಾನವು ಇದಕ್ಕಾಗಿ ನೀಡಲ್ಪಡುತ್ತದೆ.
ಎ) ಭೌತಶಾಸ್ತ್ರ
ಬಿ) ಔಷಧ
ಸಿ) ಕ್ರೀಡೆ
ಡಿ) ಸಾಹಿತ್ಯ
1043. ಭಾರತೀಯ ಸಶಸ್ತ್ರ ಪಡೆಗಳು ಇದನ್ನು ಹೊಂದಿಲ್ಲ.
ಎ) ಭಾರತೀಯ ಸೈನ್ಯ
ಬಿ) ಭಾರತೀಯ ಆಕಾಶಪಡೆ
ಡಿ) ಭಾರತೀಯ ನೌಕಾದಳ
ಡಿ) ಭಾರತೀಯ ವಾಯುಪಡೆ
1044. 6 ಕಿ.ಮೀ ನಡೆದ ನಂತರ ನಾನು ಬಲಕ್ಕೆ ತಿರುಗಿದೆ ಮತ್ತು 2 ಕಿ.ಮೀ ದೂರ ಪ್ರಯಾಣಿಸಿದೆ. ಮತ್ತೆ ಎಡಕ್ಕೆತಿರುಗಿ 10 ಕಿ.ಮೀ ದೂರ ಕ್ರಮಿಸಿದೆ ಕೊನೆಯಲ್ಲಿ ನಾನು ಉತ್ತರದತ್ತ ಚಲಿಸುತ್ತಲಿದ್ದೆ ನಾನು ಯಾವ ದಿಕ್ಕಿನಿಂದ ಪ್ರಯಾಣ ಪ್ರಾರಂಭಿಸಿದೆ?
ಎ) ಉತ್ತರ
ಬಿ) ದಕ್ಷಿಣ
ಸಿ) ನೈಋತ್ಯ
ಡಿ) ಈಶಾನ್ಯ
1045. ‘ಎ’ ಯು ‘ಬಿ’ ಯ ಪತಿಯಾಗಿರುತ್ತಾನೆ. ‘ಇ’ ಯು ‘ಸಿ’ ಯ ಮಗಳಾಗಿರುತ್ತಾಳೆ. ‘ಎ’ ಯು ‘ಸಿ’ ಯ ತಂದೆ ಆಗಿರುತ್ತಾನೆ. ‘ಬಿ’ ಯು ‘ಇ’ ಗೆ ಹೇಗೆ ಸಂಬಂಧಿಯಾಗಿರುತ್ತಾಳೆ?
ಎ) ತಾಯಿ
ಬಿ) ಅಜ್ಜಿ
ಸಿ) ಸೋದರತ್ತೆ
ಡಿ) ಸೋದರಸಂಬಂಧಿ
1046. ನೀವು 1ರಿಂದ 100 ರವರೆಗಿನ ಎಲ್ಲಾ ಸಂಖ್ಯೆಗಳನ್ನು ಬರೆಯತ್ತೀರಿ ಎಂದಾದರೆ, ನೀವು ‘3’ ಸಂಖ್ಯೆಯನ್ನು ಎಷ್ಟುಬಾರಿ ಬರೆಯುತ್ತೀರಿ?
ಎ) 18
ಬಿ) 19
ಸಿ) 20
ಡಿ) 21
1047. ಶೂನ್ಯವೇಳೆ ಇವರ ವಿವೇಚನೆಯಲ್ಲಿರುತ್ತದೆ.
ಎ) ಪ್ರಧಾನಮಂತ್ರಿ
ಬಿ) ರಾಷ್ಟ್ರಾಧ್ಯಕ್ಷರು
ಸಿ) ಸದನದ ಸದಸ್ಯರು
ಡಿ) ಸಭಾಧ್ಯಕ್ಷರು
1048. ಕ್ರಿಮಿಕೀಟಗಳನ್ನು ಭಕ್ಷಿಸುವ ಸಸ್ಯ
ಎ) ಕಸ್ಕುಟ್
ಬಿ) ಚೈನಾ ರೋಸ್
ಸಿ) ಪಿರ್ ಸಸ್ಯ (ಹೂಜಿಗಿಡ)
ಡಿ) ಗುಲಾಬಿ
1049. ಕೆಳಗಿನವುಗಳಲ್ಲಿ ಯಾವುದು ಉಣ್ಣೆಯನ್ನು ನೀಡುವುದಿಲ್ಲ?
ಎ) ಯಾಕ್
ಬಿ) ಒಂಟೆ
ಸಿ) ಆಡು
ಡಿ) ಮೋಲಿ ನಾಯಿ
1050. ದುಗ್ಧಾಮ್ಲ ಇದರಲ್ಲಿ ಕಂಡುಬರುತ್ತದೆ.
ಎ) ಅಕ್ಕಿ
ಬಿ) ಚಹಾ
ಸಿ) ಮೊಸರು
ಡಿ) ಕಾಫಿ
ಭಾಗ 75ರ ಉತ್ತರಗಳು: 1026. ಡಿ, 1027. ಎ, 1028. ಎ, 1029. ಎ, 1030. ಡಿ, 1031. ಎ, 1032. ಡಿ, 1033. ಡಿ, 1034. ಸಿ, 1035. ಡಿ, 1036. ಡಿ, 1037. ಎ, 1038. ಡಿ, 1039. ಎ, 1040. ಡಿ
(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)
ಸಿಐಎಸ್‌ಎಫ್ ವಿಸ್ತಾರ ರೂಪ ಯಾವುದು?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.