ಕರ್ನಾಟಕ ಲೋಕಸೇವಾ ಆಯೋಗ 384 ಗೆಜೆಟೆಡ್ ಪ್ರೊಬೇಷನರ್ 2023-24ನೇ ಸಾಲಿನ ಹುದ್ದೆಗಳನ್ನು ಭರ್ತಿ ಮಾಡಲು ಪೂರ್ವಭಾವಿ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದೆ. 159 ಗ್ರೂಪ್ ಎ ವೃಂದದ ಹುದ್ದೆಗಳು, 225 ಗ್ರೂಪ್ ಬಿ ವೃಂದದ ಹುದ್ದೆಗಳು ಸೇರಿ ಒಟ್ಟು 384 ಹುದ್ದೆಗಳಿವೆ. ಯಾವುದೇ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ನೇಮಕಾತಿ ಪ್ರಾಧಿಕಾರ: ಕರ್ನಾಟಕ ಲೋಕಸೇವಾ ಆಯೋಗ
ಹುದ್ದೆಯ ಹೆಸರು: ಗೆಜೆಟೆಡ್ ಪ್ರೊಬೇಷನರ್ (ಕೆಎಎಸ್ ಹುದ್ದೆಗಳು)
ಹುದ್ದೆಗಳ ಸಂಖ್ಯೆ: 384
‘ಗ್ರೂಪ್ ಎ’ ಹುದ್ದೆಗಳು: 159
‘ಗ್ರೂಪ್ ಬಿ’ ಹುದ್ದೆಗಳು: 225
ವಿದ್ಯಾರ್ಹತೆ: ಪದವಿ ಅಥವಾ ತತ್ಸಮಾನ.
ವಯೋಮಿತಿ ವಿವರ
ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ.
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 41 ವರ್ಷ.
ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷ.
(ಈ ಬಾರಿ 3 ವರ್ಷಗಳ ಹೆಚ್ಚುವರಿ ಅವಕಾಶ ನೀಡಲಾಗಿದೆ)
ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 04-03-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-04-2024
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 03-04-2024
ಪೂರ್ವಭಾವಿ ಪರೀಕ್ಷಾ ದಿನಾಂಕ: 05-05-2024 (ಸಂಭಾವ್ಯ ದಿನಾಂಕ)
ಕೆಎಎಸ್ ಪರೀಕ್ಷೆಯ ಪ್ರಯತ್ನಗಳು: ಸಾಮಾನ್ಯ ವರ್ಗದ ಅಭ್ಯರ್ಥಿಗಳು 5 ಬಾರಿ, ಹಿಂದುಳಿದ ವರ್ಗದ ಅಭ್ಯರ್ಥಿಗಳು 7 ಬಾರಿ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಪರೀಕ್ಷೆ ಅವಕಾಶಗಳ ಮಿತಿ ಇರುವುದಿಲ್ಲ.
ಅರ್ಜಿ ಸಲ್ಲಿಕೆ ಹೇಗೆ?
- ಕೆಪಿಎಸ್‌ಸಿ ವೆಬ್‌ಸೈಟ್ www.kpsc.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
- ಮೊದಲ ಹಂತದಲ್ಲಿ ಅಭ್ಯರ್ಥಿಗಳು ತಮ್ಮ ವಿವರ, ಶೈಕ್ಷಣಿಕ ಅರ್ಹತೆ ವಿವರ ಮತ್ತು ಇತರ ವಿವರಗಳನ್ನು ಭರ್ತಿ ಮಾಡಿ.
- ಎರಡನೇ ಹಂತದಲ್ಲಿ ಇಲಾಖೆ ಕೇಳಲಾದ ಇತರ ವಿವರ ನೀಡಿ ಅಪ್ಲಿಕೇಶನ್ ಸಬ್‌ಮಿಟ್ ಮಾಡಿ.
- ಮೂರನೇ ಹಂತದಲ್ಲಿ ಅರ್ಜಿ ಶುಲ್ಕ ಪಾವತಿಸಬೇಕು.
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹600.
ಇತರೆ ಹಿಂದುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ₹300.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹50
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕದ ಜೊತೆಗೆ ಎಲ್ಲ ಅಭ್ಯರ್ಥಿಗಳು ಪ್ರೋಸೆಸಿಂಗ್ ಚಾರ್ಜ್ ₹35 ಪಾವತಿಸಬೇಕು.
ಕೆಎಎಸ್ ಹುದ್ದೆಗಳ ವೇತನ ಶ್ರೇಣಿ : ರೂ.56,800 - 99,600 ವರೆಗೆ ಇರುತ್ತದೆ.
––––––––
ಗ್ರೂಪ್ ಎ ಕೆಎಎಸ್ ಹುದ್ದೆಗಳು
ಸಹಾಯಕ ಆಯುಕ್ತರು (ಕಿರಿಯ ಶ್ರೇಣಿ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ: 40
ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ: 41
ಸಹಾಯಕ ನಿರ್ದೇಶಕರು, ಖಜಾನೆ ಇಲಾಖೆ: 02
ಕಾರ್ಯನಿರ್ವಾಹಕ ಅಧಿಕಾರಿ / ಸಹಾಯಕ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ: 40
ಡಿವೈಎಸ್‌ಪಿ ಒಳಾಡಳಿತ ಇಲಾಖೆ: 09
ಸಹಾಯಕ ನಿರ್ದೇಶಕರು ಗ್ರೇಡ್-1 ಸಮಾಜ ಕಲ್ಯಾಣ ಇಲಾಖೆ: 20
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ / ಸಹಾಯಕ ನಿರ್ದೇಶಕರು / ಪ್ರಾಂಶುಪಾಲರು (ಪಿಇಟಿಸಿ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: 07
ಒಟ್ಟು ಗ್ರೂಪ್ ಎ ಕೆಎಎಸ್ ಪೋಸ್ಟ್‌ಗಳ ಸಂಖ್ಯೆ: 159
ಗ್ರೂಪ್ ಬಿ ಕೆಎಎಸ್ ಹುದ್ದೆಗಳ ವಿವರ
ತಹಶೀಲ್ದಾರ್ (ಗ್ರೇಡ್-2) ಕಂದಾಯ ಇಲಾಖೆ: 51
ವಾಣಿಜ್ಯ ತೆರಿಗೆ ಅಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆ: 59
ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ: 04
ಸಹಾಯಕ ಅಧೀಕ್ಷಕರು, ಒಳಾಡಳಿತ ಇಲಾಖೆ (ಕಾರಾಗೃಹ): 03
ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಹಕಾರ ಇಲಾಖೆ: 12
ಸಹಾಯಕ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ: 09
ಅಬಕಾರಿ ಉಪ ಅಧೀಕ್ಷಕರು, ಆರ್ಥಿಕ ಇಲಾಖೆ (ಅಬಕಾರಿ): 10
ಉದ್ಯೋಗಾಧಿಕಾರಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ: 03
ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ: 04
ಮುಖ್ಯಾಧಿಕಾರಿ (ಗ್ರೇಡ್-1), ನಗರಾಭಿವೃದ್ಧಿ ಇಲಾಖೆ: 01
ಸಹಾಯಕ ಖಜಾನಾಧಿಕಾರಿ, ಆರ್ಥಿಕ ಇಲಾಖೆ, (ಖಜಾನೆ): 46
ಸಹಾಯಕ ನಿರ್ದೇಶಕರು, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ: 09
ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ: 02
ಶಾಖಾಧಿಕಾರಿ, ಕರ್ನಾಟಕ ಸರ್ಕಾರದ ಸಚಿವಾಲಯ: 05
ಸಹಾಯಕ ನಿರ್ದೇಶಕರು (ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ: 07
ಒಟ್ಟು ಗ್ರೂಪ್ ಬಿ ಕೆಎಎಸ್ ಹುದ್ದೆಗಳ ಸಂಖ್ಯೆ: 225
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.