ಭಾಗ– 74
1011. ಕೆಳಗಿನವುಗಳಲ್ಲಿ ಯಾವುದು ಕಾಳಿದಾಸನ ಕೃತಿಯಲ್ಲ?
ಎ) ಕುಮಾರಸಂಭವ
ಬಿ) ಮೇಘದೂತ
ಸಿ) ಅಭಿಜ್ಞಾನ ಶಾಕುಂತಲ
ಡಿ) ಮೃಚ್ಛಕಟಿಕ
1012. ಯಾವ ವೇದವು ವರ್ಣಾಶ್ರಮ ಪದ್ಧತಿಗೆ ಸಂಬಂಧಿಸಿದೆ?
ಎ) ಋಗ್ವೇದ
ಬಿ) ಯಜುರ್ವೇದ
ಸಿ) ಸಾಮವೇದ
ಡಿ) ಅಥರ್ವಣವೇದ
1013. ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆ ಆಗಿಲ್ಲ?
ಎ) ಮೌರ್ಯ ಸಾಮ್ರಾಜ್ಯ- ಚಂದ್ರಗುಪ್ತ ಮೌರ್ಯ
ಬಿ) ಶುಂಗ ರಾಜವಂಶ- ಪುಷ್ಯಮಿತ್ರಶುಂಗ
ಸಿ) ಶಾತವಾಹನ ರಾಜವಂಶ- ಗೌತಮಿಪುತ್ರ ಶಾತಕರ್ಣಿ
ಡಿ) ವಿಜಯನಗರ ಸಾಮ್ರಾಜ್ಯ- ಹರಿಹರ, ಬುಕ್ಕ
1014. ರಾಣಿ ತ್ರಿಶಲಾ ಯಾರ ತಾಯಿ?
ಎ) ಮಹಾವೀರ
ಬಿ) ಗೌತಮ ಬುದ್ಧ
ಸಿ) ಅಶೋಕ
ಡಿ) ಕನಿಷ್ಕ
1015. ಬಡಗುತಿಟ್ಟು ಯಾವ ಕಲೆಯ ಪ್ರಕಾರವಾಗಿದೆ?
ಎ) ಡೊಳ್ಳುಕುಣಿತ
ಬಿ) ವೀರಗಾಸೆ
ಸಿ) ಯಕ್ಷಗಾನ
ಡಿ) ದೊಡ್ಡಾಟ
1016. ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿಲ್ಲ?
ಎ) ಆಸ್ಟ್ರೇಲಿಯನ್ ಓಪನ್- ಸಿಡ್ನಿ
ಬಿ) ಫ್ರೆಂಚ್ ಓಪನ್- ಪ್ಯಾರಿಸ್
ಸಿ) ಯುಎಸ್ ಓಪನ್- ನ್ಯೂಯಾರ್ಕ್
ಡಿ) ವಿಂಬಲ್ಡನ್- ಲಂಡನ್
1017. ಕೆಳಗಿನವುಗಳಲ್ಲಿ ಯಾವುದನ್ನು ‘ಫೋರ್ಥ್ ಎಸ್ಟೇಟ್’ ಎಂದು ಕರೆಯುತ್ತಾರೆ?
ಎ) ಕಾರ್ಯಾಂಗ
ಬಿ) ಮಾಧ್ಯಮ
ಸಿ) ಶಾಸಕಾಂಗ
ಡಿ) ನ್ಯಾಯಾಂಗ
1018. ಭಾರತದ ‘ಕ್ಷಿಪಣಿ ಮನುಷ್ಯ’ ಎಂದು ಪ್ರಸಿದ್ಧರಾದವರು ಯಾರು?
ಎ) ವಿಕ್ರಂ ಸಾರಾಭಾಯಿ
ಬಿ) ಸತೀಶ್ ಧವನ್
ಸಿ) ಎ.ಪಿ.ಜೆ. ಅಬ್ದುಲ್ ಕಲಾಂ
ಡಿ) ಎಂ.ಎಸ್. ಸ್ವಾಮಿನಾಥನ್
1019. ಭಾರತದ ಸಂವಿಧಾನದ 92ನೇ ತಿದ್ದುಪಡಿಯ ಮೂಲಕ 8ನೇ ಅನುಸೂಚಿಗೆ ಕೆಳಗಿನ ಯಾವ ಭಾಷೆಯನ್ನು ಸೇರಿಸಿಲ್ಲ?
ಎ) ಭೋಜ್‌ಪುರಿ
ಬಿ) ಬೋಡೋ
ಸಿ) ಡೋಗ್ರಿ
ಡಿ) ಮೈಥಿಲಿ
1020. ದಕ್ಷಿಣ ಭಾರತದ ಅತೀ ಉದ್ದವಾದ ನದಿ ಯಾವುದು?
ಎ) ಕಾವೇರಿ
ಬಿ) ಗೋದಾವರಿ
ಸಿ) ಕೃಷ್ಣಾ
ಡಿ) ತುಂಗಭದ್ರಾ
1021. ಹಾಫ್-ಮ್ಯಾರಥಾನ್‌ನಲ್ಲಿ ಕ್ರಮಿಸುವ ದೂರ ಎಷ್ಟು?
ಎ) 18 ಕಿ.ಮೀ
ಬಿ) 20 ಕಿ.ಮೀ
ಸಿ) 21 ಕಿ.ಮೀ
ಡಿ) 22 ಕಿ.ಮೀ
1022. ಮಾಹಿತಿ ಹಕ್ಕು ಏನು?
ಎ) ಸಾಂವಿಧಾನಿಕ ಹಕ್ಕು
ಬಿ) ಕಾನೂನುಬದ್ಧ ಹಕ್ಕು
ಸಿ) ಮೂಲಭೂತ ಹಕ್ಕು
ಡಿ) ಸ್ವಾಭಾವಿಕ ಹಕ್ಕು
1023. ರಾಷ್ಟ್ರದ ಪ್ರಾದೇಶಿಕ ಜಲವು ಅದರ ಕರಾವಳಿಯಿಂದ ಎಷ್ಟು ದೂರದವರೆಗೆ ವ್ಯಾಪಿಸಿರುತ್ತದೆ?
ಎ) 20 ಕಿ.ಮೀ
ಬಿ) 20 ನಾಟಿಕಲ್ ಮೈಲುಗಳು
ಸಿ) 12 ಕಿ.ಮೀ
ಡಿ) 12 ನಾಟಿಕಲ್ ಮೈಲುಗಳು
1024. ಸರಕು ಮತ್ತು ಸೇವೆಗಳ ತೆರಿಗೆ ಇದಾಗಿರುತ್ತದೆ.
ಎ) ನೇರ ತೆರಿಗೆ
ಬಿ) ಪರೋಕ್ಷ ತೆರಿಗೆ
ಸಿ) ಎರಡರ ಮಿಶ್ರಣ
ಡಿ) ಇದು ಸರಕು ಮತ್ತು ಸೇವೆಗಳ ತೆರಿಗೆ ಮೇಲೆ ಅವಲಂಬಿಸಿರುತ್ತದೆ.
1025. 1919ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ತನಿಖೆ ನಡೆಸಲು ಯಾವ ಸಮಿತಿಯು ಬ್ರಿಟಿಷ್ ಸರ್ಕಾರದಿಂದ ನೇಮಿಸಲ್ಪಟ್ಟಿತ್ತು?
ಎ) ವೆಲ್ಬಿ ಆಯೋಗ
ಬಿ) ಹಂಟರ್ ಸಮಿತಿ
ಸಿ) ಸೈಮನ್ ಆಯೋಗ
ಡಿ) ಬಟ್ಲರ್ ಸಮಿತಿ
ಭಾಗ 73ರ ಉತ್ತರಗಳು: 1001. ಎ, 1002. ಡಿ, 1003. ಸಿ, 1004. ಎ, 1005. ಡಿ, 1006. ಬಿ, 1007. ಎ, 1008. ಡಿ, 1009. ಡಿ, 1010. ಡಿ
(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)
1011. ಕೆಳಗಿನವುಗಳಲ್ಲಿ ಯಾವುದು ಕಾಳಿದಾಸನ ಕೃತಿಯಲ್ಲ?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.