ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 1:34 IST
Last Updated 11 ಅಕ್ಟೋಬರ್ 2021, 1:34 IST
   

ಭಾಗ– 73

1001. ಲೋಕಸಭೆಯ ಸ್ಪೀಕರ್ ಯಾರಿಗೆ‌ ರಾಜೀನಾಮೆ ಪತ್ರವನ್ನು ಸಲ್ಲಿಸಬಹುದು?

ಎ) ಉಪಸಭಾಪತಿ

ADVERTISEMENT

ಬಿ) ರಾಷ್ಟ್ರಪತಿ

ಸಿ) ಮುಖ್ಯ ನ್ಯಾಯಾಧೀಶರು

ಡಿ) ಪ್ರಧಾನಮಂತ್ರಿ

1002. ಯಾವ ನಟಿಗೆ ಪ್ರಥಮ ಲಿಂಗ-ತಟಸ್ಥ ನಟನಾ ಪ್ರಶಸ್ತಿಯನ್ನು ನೀಡಲಾಗಿದೆ?

ಎ) ಮೆರಿಲ್‌ ಸ್ಟ್ರೀಪ್‌

ಬಿ) ಜೆನ್ನಿ ಫರ್ಲಾರೆನ್ಸ್

ಸಿ) ಎಮ್ಮಾ ಸ್ಟೋನ್‌

ಡಿ) ಎಮ್ಮಾ ವ್ಯಾಟ್ಸನ್

1003. ಬಂಡೀಪುರ ರಾಷ್ಟ್ರೀಯ ಉದ್ಯಾನವು ಯಾವ ರಾಜ್ಯಗಳಲ್ಲಿ ವ್ಯಾಪಿಸಿದೆ?

ಎ) ಕೇರಳ, ತಮಿಳುನಾಡು, ಆಂಧ್ರಪ್ರದೇಶ

ಬಿ) ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ

ಸಿ) ಕರ್ನಾಟಕ, ಕೇರಳ, ತಮಿಳುನಾಡು

ಡಿ) ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು

1004. ಕೆಳಗಿನವುಗಳಲ್ಲಿ ಯಾವ ಕ್ರೀಡೆ ಕಾಮನ್‌ವೆಲ್ತ್‌ ಗೇಮ್ಸ್‌ ಭಾಗವಲ್ಲ?

ಎ) ಟೆನಿಸ್‌

ಬಿ) ಬಾಕ್ಸಿಂಗ್

ಸಿ) ಸ್ಕ್ವಾಶ್‌

ಡಿ) ಸೈಕ್ಲಿಂಗ್

1005. ಪ್ರವೀಣ ಗೋಡ್ಖಿಂಡಿ ನುಡಿಸುವ ವಾದ್ಯ ಯಾವುದು?

ಎ) ತಬಲಾ

ಬಿ) ಪಿಯಾನೊ

ಸಿ) ವೀಣೆ

ಡಿ) ಕೊಳಲು

1006. ‘ಆಲಿವ್‌ ರಿಡ್ಲಿ’ ಆಮೆಗಳ ಹೆಚ್ಚಿನ ಸಂಖ್ಯೆಯ ಗೂಡುಕಟ್ಟುವಿಕೆ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?

ಎ) ಪಶ್ಚಿಮಬಂಗಾಳ

ಬಿ) ಒಡಿಶಾ

ಸಿ) ಗುಜರಾತ್‌

ಡಿ) ತಮಿಳುನಾಡು

1007. ‘ವಿಶ್ವ ಅಭಿವೃದ್ಧಿ ವರದಿ’ಯನ್ನು ಯಾವ ಸಂಸ್ಥೆಯು ಪ್ರಕಟಿಸುತ್ತದೆ?

ಎ) ವಿಶ್ವಬ್ಯಾಂಕ್

ಬಿ) ಅಂತರರಾಷ್ಟ್ರೀಯ ಹಣಕಾಸುನಿಧಿ

ಸಿ) ವಿಶ್ವಸಂಸ್ಥೆಯ ಔದ್ಯೋಗಿಕ ಅಭಿವೃದ್ಧಿ ಸಂಸ್ಥೆ

ಡಿ) ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ

1008. ಭಾರತದ ಸಂವಿಧಾನದ 1ನೇ ವಿಧಿಯು ಭಾರತವನ್ನು ಏನೆಂದು ಕರೆಯುತ್ತದೆ?

ಎ) ಯುನಿಟರಿ ಸ್ಟೇಟ್

ಬಿ) ಫೆಡರೇಶನ್

ಸಿ) ಕ್ವಾಸಿ-ಫೆಡರಲ್

ಡಿ) ಯೂನಿಯನ್ ಆಫ್‌ ಸ್ಟೇಟ್ಸ್

1009. ಕೆಳಗಿನ ಸರಣಿಯಲ್ಲಿ ಬಿಟ್ಟು ಹೋದ ಸಂಖ್ಯೆಯನ್ನು ಕಂಡುಹಿಡಿಯಿರಿ.

23, 45, 89, 177 ----

ಎ) 356

ಬಿ) 355

ಸಿ) 354

ಡಿ) 353

1010. ಗಿರೀಶನ ವಯಸ್ಸು ಸತೀಶನ ವಯಸ್ಸಿಗಿಂತ ಎರಡು ಪಟ್ಟು ಜಾಸ್ತಿ ಇದೆ. ಮೂರು ವರ್ಷಗಳ ಹಿಂದೆ ಗಿರೀಶನ ವಯಸ್ಸು ಸತೀಶನ ವಯಸ್ಸಿಗಿಂತ ಮೂರು ಪಟ್ಟು ಜಾಸ್ತಿ ಇತ್ತು. ಈಗ ಗಿರೀಶನ ವಯಸ್ಸೆಷ್ಟು?

ಎ) 6 ವರ್ಷಗಳು

ಬಿ) 7 ವರ್ಷಗಳು

ಸಿ) 8 ವರ್ಷಗಳು

ಡಿ) 12 ವರ್ಷಗಳು

ಭಾಗ 72ರ ಉತ್ತರಗಳು: 986. ಡಿ, 987. ಬಿ, 988. ಎ, 989. ಬಿ, 990. ಬಿ, 991. ಡಿ, 992. ಸಿ, 993. ಡಿ, 994. ಸಿ, 995. ಬಿ, 996. ಎ, 997. ಡಿ, 998. ಬಿ, 999. ಡಿ, 1000. ಬಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ಸಾರಾಂಶ

ಲೋಕಸಭೆಯ ಸ್ಪೀಕರ್ ಯಾರಿಗೆ‌ ರಾಜೀನಾಮೆ ಪತ್ರವನ್ನು ಸಲ್ಲಿಸಬಹುದು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.