ಲೆಕ್ಕಪತ್ರ ಇಲಾಖೆ ಹಾಗೂ ಸಹಕಾರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು(ಕೆಪಿಎಸ್‌ಸಿ) ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ 242 ಲೆಕ್ಕ ಸಹಾಯಕರ ಹುದ್ದೆಗಳು ಹಾಗೂ ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿರೀಕ್ಷಕರ 47 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ.
ಹುದ್ದೆಗಳ ವಿವರ..
1) ಲೆಕ್ಕ ಸಹಾಯಕರು: 242 ಹುದ್ದೆಗಳು
2) ಸಹಕಾರ ಸಂಘಗಳ ನಿರೀಕ್ಷಕರು: 47 ಹುದ್ದೆಗಳು
1) ಲೆಕ್ಕ ಸಹಾಯಕರು: 242 ಹುದ್ದೆಗಳು ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಕಾಂ, ಬಿ.ಬಿ.ಎಂ ಅಥವಾ ತತ್ಸಮಾನ ಪದವಿ ವೇತನ: ₹ 27.600–₹ 52,650 ವಯಸ್ಸು: ಕನಿಷ್ಠ 18, ಗರಿಷ್ಠ 35 ವರ್ಷಗಳು. ಸರ್ಕಾರಿ ಮೀಸಲಾತಿ ಅನ್ವಯ ವಯಸ್ಸಿನಲ್ಲಿ ಸಡಿಲಿಕೆ ಇರಲಿದೆ. ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹600, ಪ್ರವರ್ಗ 2ಎ, 2ಬಿ,3ಎ,3ಬಿ ಅಭ್ಯರ್ಥಿಗಳಿಗೆ ₹300, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹50, ಎಸ್‌ಸಿ, ಎಸ್‌ಟಿ, ಪ್ರ.ವ 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
2) ಸಹಕಾರ ಸಂಘಗಳ ನಿರೀಕ್ಷಕರು: 47 ಹುದ್ದೆಗಳು
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಅಗ್ರಿಕಲ್ಚರಲ್ ಸೈನ್ಸ್, ಮಾರ್ಕೆಟಿಂಗ್ ಅಂಡ್ ಕೋಆಪರೇಷನ್, ಕಾಮರ್ಸ್ ಅಂಡ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಪದವಿ ಹಾಗೂ ತತ್ಸಮಾನ
ವೇತನ: ₹ 27.600–₹ 52,650
ವಯಸ್ಸು: ಕನಿಷ್ಠ 18, ಗರಿಷ್ಠ 35 ವರ್ಷಗಳು. ಸರ್ಕಾರಿ ಮೀಸಲಾತಿ ಅನ್ವಯ ವಯಸ್ಸಿನಲ್ಲಿ ಸಡಿಲಿಕೆ ಇರಲಿದೆ.
ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹600, ಪ್ರವರ್ಗ 2ಎ, 2ಬಿ,3ಎ,3ಬಿ ಅಭ್ಯರ್ಥಿಗಳಿಗೆ ₹300, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹50, ಎಸ್‌ಸಿ, ಎಸ್‌ಟಿ, ಪ್ರ.ವ 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ನೇಮಕಾತಿ ವಿಧಾನ: ಸ್ಪರ್ದಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ನೋಡಿ.
ವಯಸ್ಸಿನ ಅರ್ಹತೆ:
ಸಾಮಾನ್ಯ ಅಭ್ಯರ್ಥಿಗಳಿಗೆ– 35 ವರ್ಷ.
ಓಬಿಸಿ ಅಭ್ಯರ್ಥಿಗಳಿಗೆ– 38 ವರ್ಷ.
ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ– 40 ವರ್ಷ.
ಅಂಗವಿಕಲರಿಗೆ – 45 ವರ್ಷಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 23, 2023
ಮಾಹಿತಿಗಾಗಿ ವೆಬ್‌ಸೈಟ್: https://kpsc.kar.nic.in
ಲಿಂಕ್‌ಗಳು...
1) ಲೆಕ್ಕ ಸಹಾಯಕರು: 242 ಹುದ್ದೆಗಳು: https://kpsc.kar.nic.in/Account%20Assistant%20242%20RPC.pdf
2) ಸಹಕಾರ ಸಂಘಗಳ ನಿರೀಕ್ಷಕರು: 47 ಹುದ್ದೆಗಳು: https://www.kpsc.kar.nic.in/Co-operative%20Society%20Inspector%2047%20_R...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.