ADVERTISEMENT

ಬಡ ಮಕ್ಕಳ ಬಾಳಿಗೆ ಬೆಳಕಾದ ಶಿವಕುಮಾರ ಸ್ವಾಮೀಜಿ- ಮಲ್ಲಿಕಾರ್ಜುನ ಅಲ್ಲಿಪುರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 12:15 IST
Last Updated 21 ಜನವರಿ 2022, 12:15 IST
ಸೈದಾಪುರ ಪಟ್ಟಣದ ಪ್ರಜ್ಞಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಮಾಡಲಾಯಿತು
ಸೈದಾಪುರ ಪಟ್ಟಣದ ಪ್ರಜ್ಞಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಮಾಡಲಾಯಿತು   

ಸೈದಾಪುರ: ‘ಶಿವಕುಮಾರ ಸ್ವಾಮೀಜಿ ಅನ್ನ, ಅಕ್ಷರ, ಆಶ್ರಯ ವ್ಯವಸ್ಥೆ ನೀಡಿ ಬಡ ಮಕ್ಕಳ ಬಾಳಿಗೆ ಬೆಳಕಾಗಿ ತ್ರಿವಿಧ ದಾಸೋಹಿ ಎಂದು ಪ್ರಖ್ಯಾತಿ ಗಳಿಸಿದ್ದರು’ ಎಂದು ಪ್ರಜ್ಞಾ ಕೈಗಾರಿಕಾ ತರಬೇತಿ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲಿಪುರ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರಜ್ಞಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಡಾ. ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿವಕುಮಾರ ಸ್ವಾಮೀಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುವ ಮೂಲಕ ಸಮಾಜದಲ್ಲಿನ ಅಂಧಕಾರ ತೊಡೆದು ಹಾಕಿ, ದೇಶದ ಮನೆ ಮನೆಗಳಲ್ಲಿ ಜ್ಞಾನದ ಪ್ರಜ್ವಲ ಜ್ಯೋತಿ ಸದಾ ಬೆಳಗುವಂತೆ ಮಾಡಿ ಹೋಗಿದ್ದಾರೆ. ಲಕ್ಷಾಂತರ ಹಸಿದ ಬಡ ಮಕ್ಕಳಿಗೆ ಅನ್ನವನ್ನಿಟ್ಟು ಧರ್ಮದ ಉಳಿವಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು.

ADVERTISEMENT

ಕಿರಿಯ ತರಬೇತಿ ಅಧಿಕಾರಿಗಳಾದ ಭೀಮಣ್ಣ ಮಡಿವಾಳಕರ್, ಶಂಕರ್ ರೆಡ್ಡಿ ಗೌಡ ಬಿಳ್ಹಾರ, ಮಹಾದೇವಪ್ಪ ದದ್ದಲ್, ಪರ್ವತರೆಡ್ಡಿ ದದ್ದಲ್, ವೆಂಕಟರೆಡ್ಡಿ ಮಡಿವಾಳ, ಮಲ್ಲಿಕಾರ್ಜುನ ಕಣೇಕಲ್ ಸೇರಿದಂತೆ ಇತರರಿದ್ದರು.

ಸಾರಾಂಶ

‘ಶಿವಕುಮಾರ ಸ್ವಾಮೀಜಿ ಅನ್ನ, ಅಕ್ಷರ, ಆಶ್ರಯ ವ್ಯವಸ್ಥೆ ನೀಡಿ ಬಡ ಮಕ್ಕಳ ಬಾಳಿಗೆ ಬೆಳಕಾಗಿ ತ್ರಿವಿಧ ದಾಸೋಹಿ ಎಂದು ಪ್ರಖ್ಯಾತಿ ಗಳಿಸಿದ್ದರು’ ಎಂದು ಪ್ರಜ್ಞಾ ಕೈಗಾರಿಕಾ ತರಬೇತಿ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲಿಪುರ ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.