ಪ್ರಜಾವಾಣಿ ವಾರ್ತೆ
ಸೈದಾಪುರ: ಸುಖಿ ಜೀವನವನ್ನು ಸಾಗಿಸುವ ಮಾರ್ಗದಲ್ಲಿ ಒತ್ತಡಕ್ಕೆ ಸಿಲುಕಿದ ಮನುಷ್ಯ ನಾನಾ ರೀತಿಯಾಗಿ ದುಃಖಿತನಾಗಿದ್ದಾನೆ. ಅದರಿಂದ ಹೊರ ಬಂದು ಜೀವನ ಪಾವನ ಮಾಡಿಕೊಳ್ಳಲು ಸದ್ಗುರುವಿನ ಉಪದೇಶವನ್ನು ನಾವೆಲ್ಲರೂ ಪಾಲಿಸಬೇಕು ಎಂದು ಬೀದರ್‌ನ ಚಿದಂಬರಾಶ್ರಮ ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ಪಟ್ಟಣದ ಸಿದ್ಧಚೇತನಾಶ್ರಮ ಸಿದ್ದಾರೂಢಮಠದಲ್ಲಿ ಶಿವಕುಮಾರ ಸ್ವಾಮೀಜಿಯ 80ನೇ ವರ್ಷದ ಸಹಸ ಚಂದ್ರದರ್ಶನ ಜಯಂತಿ ನಿಮಿತ್ಯ ಮಠದ ಸದ್ಭಕ್ತ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ತುಲಾಭಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಾನವ ತನಗೆ ಸುಖ ಶಾಂತಿಯನ್ನು ಅನೇಕ ವಸ್ತುಗಳಲ್ಲಿ, ಸ್ಥಳಗಳಲ್ಲಿ ಹುಡುಕುವುದು ಬಿಟ್ಟು, ಶುದ್ಧ ಮನಸ್ಸು, ಸಮರ್ಪಣೆ ಮನೋಭಾವದಿಂದ ಗುರುವಿಗೆ ಶರಣಾಗಿ, ಸದ್ಗುರುವಿನ ಉಪದೇಶವನ್ನು ಆಲಿಸುವ ಜತೆಗೆ ಅದನ್ನು ಪಾಲಿಸಬೇಕು. ಅಂದಾಗ ಮಾತ್ರ ಜೀವನದಲ್ಲಿ ಶಾಂತಿ, ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ’ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕಲಬುರಗಿಯ ಪೂರ್ಣಪ್ರಜ್ಞಾಯೋಗಾಶ್ರಮ ಲಕ್ಷ್ಮೀದೇವಿ ತಾಯಿ ಮಾತನಾಡಿ, ಸದ್ಗುರುನಾಥನ ಕಾರ್ಯಗಳು ವರ್ಣಿಸಲು ಅಸಾಧ್ಯ ಎಂದರು.
ಸೈದಾಪುರದ ಸಿದ್ದಚೇತನಾಶ್ರಮ ಸಿದ್ದಾರೂಢಮಠದ ಪೀಠಾಧಿಪತಿ ಸೋಮೇಶ್ವರಾನಂದ ಸ್ವಾಮೀಜಿ ಮಾತನಾಡಿ, ಮುಂದಿನ ದಿನಗಳಲ್ಲಿ ಉದ್ದೇಶಿತ ಸಿದ್ಧಾರೂಢರ ದೇವಾಲಯ ನಿರ್ಮಾಣ ಪೂರ್ಣಗೊಂಡ ನಂತರ ಅತಿ ದೊಡ್ಡ ಮಟ್ಟದ ಸಂತರ ಸಮ್ಮೇಳನವನ್ನು ಏರ್ಪಡಿಸಲಾಗುವುದು ಎಂದರು.
ತುಲಾಭಾರ: ಸಿದ್ದಾರೂಢಮಠದ ಭಕ್ತರು ಹಮ್ಮಿಕೊಂಡಿದ್ದ ತುಲಾಭಾರ ಕಾರ್ಯಕ್ರಮದಲ್ಲಿ ಸ್ವಾಮೀಜಿಗೆ ಮಹಿಳೆಯರು ಆರತಿ ಬೆಳಗಿದರೆ, ಪುರುಷರು ಭಜನೆಯ ಗೀತೆಗಳನ್ನು ಹಾಡಿದರು. ನಂತರ ನಾಣ್ಯಗಳ ಮೂಲಕ ತುಲಾಭಾರ ನಡೆಯಿತು.
ಕೊನ್ನಳ್ಳಿ ಸಿದ್ಧಾರೂಢ ಮಠದ ನಿತ್ಯಾನಂದ ಸ್ವಾಮೀಜಿ, ಕಲಬುರಗಿ ಸಿದ್ಧಾರೂಢ ಮಠದ ವಿದ್ಯಾತಾಯಿ, ಭಕ್ತ ಮಂಡಳಿಯ ಪ್ರೇಮರಾಜ ದೋಕಾ, ಕೆಬಿ ಬನ್ನಯ್ಯ, ವಿಶ್ವನಾಥರೆಡ್ಡಿಗೌಡ ಚಿಗಾನೂರು, ಶೇರಣಿಕಕುಮಾರ ದೋಕಾ, ಭೀಮಣ್ಣಗೌಡ ಕ್ಯಾತ್ನಾಳ್, ನಿವೃತ್ತ ಶಿಕ್ಷಕ ಸಿದ್ದಲಿಂಪ್ಪಗೌಡ ಮುನಗಾಲ, ಮಲ್ಲುಗೌಡ ಸೈದಾಪುರ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಆಗಮಿಸಿದ್ದರು.
ಚಿತ್ರಶೀರ್ಷಿಕೆ:10ಎಸ್‍ಡಿಪಿಆರ್1: ಸೈದಾಪುರ ಪಟ್ಟಣದ ಸಿದ್ದಚೇತನಾಶ್ರಮ ಸಿದ್ದಾರೂಢಮಠದಲ್ಲಿ ಚಿದಂಬರಾಶ್ರಮ ಶ್ರೀ ಸಿದ್ಧಾರೂಢ ಮಠ ಬೀದರನ ಡಾ|| ಶಿವಕಮಾರ ಮಹಾಸ್ವಾಮಿಗಳ 80ನೇ ವರ್ಷದ ಸಹಸ ಚಂದ್ರದರ್ಶನ ಜಯಂತಿ ನಿಮಿತ್ಯ ಶ್ರೀ ಮಠದ ಸದ್ಭಕ್ತ ಮಂಡಳಿ ವತಿಯಿಂದ ತುಲಾಭಾರ ಮಾಡಲಾಯಿತು.
ಚಿತ್ರಶೀರ್ಷಿಕೆ:10ಎಸ್‍ಡಿಪಿಆರ್1ಎ: ಸೈದಾಪುರ ಪಟ್ಟಣದ ಸಿದ್ದಚೇತನಾಶ್ರಮ ಸಿದ್ದಾರೂಢಮಠದಲ್ಲಿ ಚಿದಂಬರಾಶ್ರಮ ಶ್ರೀ ಸಿದ್ಧಾರೂಢ ಮಠ ಬೀದರನ ಡಾ|| ಶಿವಕಮಾರ ಮಹಾಸ್ವಾಮಿಗಳ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರು.
ಚಿತ್ರಶೀರ್ಷಿಕೆ:10ಎಸ್‍ಡಿಪಿಆರ್1ಬಿ: ಸೋಮೇಶ್ವರಾನಂದ ಮಹಾಸ್ವಾಮಿಗಳು, ಪೀಠಾಧಿಪತಿ, ಸಿದ್ದಚೇತನಾಶ್ರಮ ಸಿದ್ದಾರೂಢಮಠ ಸೈದಾಪುರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.