ADVERTISEMENT

ಮೂಢನಂಬಿಕೆ ತೊಲಗಿಸಲು ಶ್ರಮಿಸಿದ್ದ ಚೌಡಯ್ಯ: ತಾಯಪ್ಪ ಚಿಗಿರಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 12:23 IST
Last Updated 21 ಜನವರಿ 2022, 12:23 IST
ಸೈದಾಪುರ ಪಟ್ಟಣದ ನಿಜ ಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಕೋಲಿ ಕಬ್ಬಲಿಗ ಸಮಾಜದ ವತಿಯಿಂದ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು
ಸೈದಾಪುರ ಪಟ್ಟಣದ ನಿಜ ಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಕೋಲಿ ಕಬ್ಬಲಿಗ ಸಮಾಜದ ವತಿಯಿಂದ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು   

ಸೈದಾಪುರ: ‘ನಿಜ ಶರಣ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಮೂಢನಂಬಿಕೆ ತೊಲಗಿಸಲು ಶ್ರಮಿಸಿದ್ದರು’ ಎಂದು ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ತಾಯಪ್ಪ ಚಿಗಿರಿ ಅಭಿಪ್ರಾಯಪಟ್ಟರು.

ಪಟ್ಟಣದ ನಿಜ ಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಕೋಲಿ ಕಬ್ಬಲಿಗ ಸಮಾಜದ ವತಿಯಿಂದ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾತಿ ಅಭಿಮಾನ ಇರಲಿ, ಆದರೆ ದುರಾಭಿಮಾನ ಬೇಡ. ಇಂಥ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಜಾತಿ ಆಧಾರದಲ್ಲಿ ತಾರತಮ್ಯ ಮಾಡದೇ ಎಲ್ಲ ವರ್ಗದವರು ಒಗ್ಗೂಡಿ ಆಚರಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಇದಕ್ಕೂ ಮುಂಚೆ ಅಂಬಿಗರ ಚೌಡಯ್ಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಗಡದ್, ಗ್ರಾ.ಪಂ. ಅಧ್ಯಕ್ಷ ಮಾಳಪ್ಪ ಅರೀಕೇರಿ, ಮುಖಂಡ ಹಣಮಂತ ವಡವಟ್ಟಿ, ಅಂಜನೇಯ ಕಾವಲಿ, ಈರಣ್ಣ ನಾಲವಾರ, ಮೋಹನರೆಡ್ಡಿ, ಗ್ರಾಪಂ ಸದಸ್ಯ ಶರಣಪ್ಪ ಬೈರಂಕೊಂಡಿ, ಹಣಮಂತ ಬಾಗ್ಲಿ, ಅರ್ಜುನ್ ಚವ್ಹಾಣ, ರಾಘವೇಂದ್ರ ಅಂಗಡಿ, ಪ್ರಭು ಗೂಗಲ್, ವಾಲ್ಮೀಕಿ ಸಮಾಜದ ಯುವ ಮುಖಂಡ ರಾಜು ದೊರೆ, ಶರಣಪ್ಪ ಬಾಗ್ಲಿ, ಶ್ರೀಶೈಲ, ಸಾಬಣ್ಣ ಬಾಗ್ಲಿ, ಗಜೇಂದ್ರ ಇದ್ದರು.

ಸಾರಾಂಶ

‘ನಿಜ ಶರಣ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಮೂಢನಂಬಿಕೆ ತೊಲಗಿಸಲು ಶ್ರಮಿಸಿದ್ದರು’ ಎಂದು ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ತಾಯಪ್ಪ ಚಿಗಿರಿ ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.