PHOTOS | ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲಿ ಬೆಲ್ಜಿಯಂ ಯುವತಿ–ಹಂಪಿ ಯುವಕನ ಮದುವೆ
Published 25 ನವೆಂಬರ್ 2022, 7:06 IST Last Updated 25 ನವೆಂಬರ್ 2022, 7:06 IST ಹೊಸಪೇಟೆ (ವಿಜಯನಗರ): ಬೆಲ್ಜಿಯಂ ದೇಶದ ಕೆಮಿಲ್ ಹಾಗೂ ಪ್ರವಾಸಿ ಮಾರ್ಗದರ್ಶಿ (ಗೈಡ್) ಅನಂತರಾಜು ಅವರ ಮದುವೆ ಇಲ್ಲಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಿಂದೂ ಸಂಪ್ರದಾಯದಂತೆ ನೆರವೇರಿತು.
ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲಿ ಬೆಲ್ಜಿಯಂ ಯುವತಿ–ಹಂಪಿ ಯುವಕನ ಮದುವೆಬೆಲ್ಜಿಯಂ ದೇಶದ ಕೆಮಿಲ್ ಹಾಗೂ ಪ್ರವಾಸಿ ಮಾರ್ಗದರ್ಶಿ (ಗೈಡ್) ಅನಂತರಾಜು ನಡುವೆ ವಿವಾಹ ನೆರವೇರಿತು. ವಿರೂಪಾಕ್ಷನ ಸನ್ನಿಧಿಯಲ್ಲಿ ಶುಕ್ರವಾರ ಬೆಳಿಗ್ಗೆ ಕುಂಭ ಲಗ್ನದಲ್ಲಿ ಶಾಸ್ತ್ರೋಕ್ತವಾಗಿ ಇಬ್ಬರು ಸಪ್ತಪದಿ ತುಳಿದರು. ವಧು–ವರರ ಕುಟುಂಬದವರು, ಸಂಬಂಧಿಕರು, ಪ್ರವಾಸಿ ಮಾರ್ಗದರ್ಶಿಗಳು ಉಪಸ್ಥಿತರಿದ್ದರು. ವಿದೇಶಿ ಯುವತಿಯೊಂದಿಗೆ ಹಂಪಿ ಜನತಾ ಕಾಲೊನಿ ಯುವಕ ವಿವಾಹವಾಗುತ್ತಿರುವುದನ್ನು ಪ್ರವಾಸಿಗರು ಕೂಡ ಕೆಲಹೊತ್ತು ನಿಂತು ಕಣ್ತುಂಬಿಕೊಂಡರು.