ಹೊಸಪೇಟೆ: ಮಹರ್ಷಿ ವಾಲ್ಮೀಕಿ ರಚಿಸಿರುವ ಶ್ಲೋಕಕ್ಕೆ ನಿರ್ದೇಶಕ ಬಾಪು ಪದ್ಮನಾಭ ಹಾಗೂ ಗಾಯಕ ಎಸ್.ಎಸ್.ಚಂದ್ರಶೇಖರ್ ಅವರು ರಾಗ ಸಂಯೋಜಿಸಿ ಹಾಡಿನ ರೂಪ ಕೊಟ್ಟಿದ್ದಾರೆ.
ಮಹರ್ಷಿ ವಾಲ್ಮೀಕಿಯವರ 'ಕೂಜಂತಂ ರಾಮ ರಾಮೇತಿ, ಮಧುರಂ ಮಧುರಾಕ್ಷರಂ' ಎಂಬ ಶ್ಲೋಕಕ್ಕೆ ಬಾಪು ಪದ್ಮನಾಭ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಎಸ್.ಎಸ್.ಚಂದ್ರಶೇಖರ್ ಮತ್ತು ಬಾಪು ಪದ್ಮನಾಭ ಹಾಡಿಗೆ ದನಿಯಾಗಿದ್ದಾರೆ.
‘ಜಗತ್ತು ಇರುವವರೆಗೂ ರಾಮಾಯಣದ ಎಲ್ಲ ಪಾತ್ರಗಳನ್ನು ನೆನೆಯುವುದರ ಜೊತೆ ರಾಮಾಯಣ ಸೃಷ್ಟಿಸಿದ ವಾಲ್ಮೀಕಿಯನ್ನು ನೆನೆಯಬೇಕು. ವಾಲ್ಮೀಕಿಯವರ ಶ್ಲೋಕವನ್ನು ರಾಗದ ರೂಪದಲ್ಲಿ ಹೊರತಂದಿದ್ದು ಬಹಳ ವಿಶೇಷ. ವಿವಿಧ ಶರಣರ ವಚನಗಳಿಗೆ ರಾಗ ಸಂಯೋಜನೆ ಮಾಡಿರುವ ಖ್ಯಾತ ಸಂಗೀತ ನಿರ್ದೇಶಕ ಬಾಪು ಪದ್ಮನಾಭ ಅವರು ಈ ಶ್ಲೋಕವನ್ನು ಗೀತೆಯ ಮೂಲಕ ಎಲ್ಲರಿಗೂ ಪರಿಚಯಿಸೋಣ ಎಂದು ನಿರ್ಧರಿಸಿ ಹಾಡನ್ನು ಹೊರತರುತ್ತಿದ್ದಾರೆ’ ಎಂದು ಗಾಯಕ ಚಂದ್ರಶೇಖರ್ ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಅ.20ರಂದು ನಡೆಯಲಿರುವ ವಾಲ್ಮೀಕಿ ಜಯಂತಿಯಲ್ಲಿ ‘ಅಂತರ್ದನಿ’ ಯೂಟ್ಯೂಬ್ ಚಾನೆಲ್ ಮೂಲಕ ಲೋಕಾರ್ಪಣೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ರಾಮಾಯಣದ 108 ಶ್ಲೋಕಗಳಿಗೆ ರಾಗ ಸಂಯೋಜಿಸಿ ಬಿಡುಗಡೆ ಮಾಡುವ ಯೋಜನೆ ಇದೆ’ ಎಂದು ಹೇಳಿದರು.
ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷ ನಾಣಿಕೇರಿ ತಿಮ್ಮಯ್ಯ, ಮುಖಂಡರಾದ ಬಂಡೆ ರಂಗಪ್ಪ, ಯಮನೂರಪ್ಪ, ಕನಕಪ್ಪ, ಕಂಪ್ಲಿ ಕಣಿಮೆಪ್ಪ ಇದ್ದರು.
ಹೊಸಪೇಟೆ: ಮಹರ್ಷಿ ವಾಲ್ಮೀಕಿ ರಚಿಸಿರುವ ಶ್ಲೋಕಕ್ಕೆ ನಿರ್ದೇಶಕ ಬಾಪು ಪದ್ಮನಾಭ ಹಾಗೂ ಗಾಯಕ ಎಸ್.ಎಸ್.ಚಂದ್ರಶೇಖರ್ ಅವರು ರಾಗ ಸಂಯೋಜಿಸಿ ಹಾಡಿನ ರೂಪ ಕೊಟ್ಟಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.