ಸಿದ್ದಾಪುರ (ಉತ್ತರ ಕನ್ನಡ): ತಾಲ್ಲೂಕಿನ ಕುಡೇಗೋಡಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ತನ್ನ ತಾಯಿ ಮತ್ತು ತಂಗಿಯನ್ನು ಬುಧವಾರ ಅಕ್ರಮ ನಾಡ ಬಂದೂಕಿನಿಂದ ಗುಂಡಿಟ್ಟು ಕೊಲೆ ಮಾಡಿದ್ದಾನೆ. ಪಾರ್ವತಿ ನಾರಾಯಣ ಹಸ್ಲರ್ (42) ಮತ್ತು ರಮ್ಯಾ ನಾರಾಯಣ ಹಸ್ಲರ್ (20) ಕೊಲೆಯಾದವರು.
ಆರೋಪಿ ಮಂಜುನಾಥ ನಾರಾಯಣ ಹಸ್ಲರ್‌ನನ್ನು (24) ಬಂಧಿಸಲಾಗಿದೆ. ಆರೋಪಿಯು ಮದ್ಯ ಸೇವನೆ ಮತ್ತು ನಾಡ ಬಂದೂಕಿನಿಂದ ಶಿಕಾರಿ ಮಾಡುವ ಚಟ ಹೊಂದಿದ್ದ. ತನ್ನ ತಾಯಿಯು ಸಹಕಾರ ಸಂಘದಲ್ಲಿ ಸಾಲ ಮಾಡಿ ತಂಗಿಗೆ ಮೊಬೈಲ್ ಫೋನ್ ಕೊಡಿಸುವ ವಿಷಯದ ಬಗ್ಗೆ ತಾಯಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದ. ಬುಧವಾರ ನಾಡ ಬಂದೂಕು ತೆಗೆದುಕೊಂಡು ಶಿಕಾರಿಗೆ ಹೋಗಿದ್ದ ಆರೋಪಿ, ಮಧ್ಯಾಹ್ನ ವಾಪಸ್ ಬಂದು ತಾಯಿಯೊಂದಿಗೆ ಜಗಳ ಮಾಡಿದ. ನಂತರ ಬಂದೂಕಿನಿಂದ ಗುಂಡು ಹಾರಿಸಿದ. ಗುಂಡು ತಗುಲಿ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ಈ ಜೋಡಿ ಕೊಲೆಯ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವಿಧಿ ವಿಜ್ಞಾನ ತಂಡವನ್ನು ಕರೆಸಲಾಗಿದೆ. ಕೊಲೆಯ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ' ಎಂದು ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದ್ದಾರೆ.
ಕುಡೇಗೋಡಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ತನ್ನ ತಾಯಿ ಮತ್ತು ತಂಗಿಯನ್ನು ಬುಧವಾರ ಅಕ್ರಮ ನಾಡ ಬಂದೂಕಿನಿಂದ ಗುಂಡಿಟ್ಟು ಕೊಲೆ ಮಾಡಿದ್ದಾನೆ. ಪಾರ್ವತಿ ನಾರಾಯಣ ಹಸ್ಲರ್ (42) ಮತ್ತು ರಮ್ಯಾ ನಾರಾಯಣ ಹಸ್ಲರ್ (20) ಕೊಲೆಯಾದವರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.