ADVERTISEMENT

ಕಾರವಾರ: ಎಲ್ಲೆಡೆ ಕಳೆಗಟ್ಟಿದ ನವರಾತ್ರಿ ಆಚರಣೆ

ಕಾರವಾರದಲ್ಲಿ ದಾಂಡಿಯಾದ ಸಡಗರ: ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 14:19 IST
Last Updated 15 ಅಕ್ಟೋಬರ್ 2021, 14:19 IST
ಕಾರವಾರದಲ್ಲಿ ಗುರುವಾರ ರಾತ್ರಿ ಆಯೋಜಿಸಲಾದ ದಾಂಡಿಯಾ ನೃತ್ಯದ ದೃಶ್ಯ
ಕಾರವಾರದಲ್ಲಿ ಗುರುವಾರ ರಾತ್ರಿ ಆಯೋಜಿಸಲಾದ ದಾಂಡಿಯಾ ನೃತ್ಯದ ದೃಶ್ಯ   

ಕಾರವಾರ: ನಗರದಲ್ಲಿ ನವರಾತ್ರಿ ಉತ್ಸವವು ಈ ಬಾರಿ ಕಳೆಗಟ್ಟಿತು. ದೇವಿ ದೇವಸ್ಥಾನಗಳಲ್ಲಿ ಒಂಬತ್ತು ದಿನ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ವಿವಿಧ ಬಡಾವಣೆಗಳಲ್ಲಿ ದಾಂಡಿಯಾ ನೃತ್ಯಕ್ಕೆ ನಿತ್ಯವೂ ನೂರಾರು ಮಂದಿ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಕೋವಿಡ್ ಕಾರಣದಿಂದ ಕಳೆದ ವರ್ಷ ಸಾರ್ವಜನಿಕವಾಗಿ ಯಾವುದೇ ಉತ್ಸವ ಹಮ್ಮಿಕೊಳ್ಳಲು ಅವಕಾಶ ಇರಲಿಲ್ಲ. ಹಾಗಾಗಿ ಹಬ್ಬವು ಕೇವಲ ಸಂಪ್ರದಾಯಕ್ಕಷ್ಟೇ ಸೀಮಿತವಾಗಿತ್ತು. ಈ ಬಾರಿ ಸೋಂಕಿನ ಪ್ರಮಾಣ ಕಡಿಮೆಯಾಗಿರುವ ಕಾರಣ, ಸಂಭ್ರಮಾಚರಣೆಗೆ ಸರ್ಕಾರ ಅವಕಾಶ ನೀಡಿದೆ. ಕೋವಿಡ್ ಸಂದರ್ಭದ ನೋವನ್ನು ಸಾರ್ವಜನಿಕರು ಒಂದಷ್ಟು ಹೊತ್ತು ಮರೆಯಲು ಇದು ಸಹಕಾರಿಯಾಯಿತು.

ನಗರದ ಸೋನಾರವಾಡ, ದೇವಳಿವಾಡಾ ಸೇರಿದಂತೆ ವಿವಿಧೆಡೆ ದುರ್ಗಾದೇವಿ ಪೆಂಡಾಲ್‌ಗಳನ್ನು ಸ್ಥಾಪಿಸಲಾಗಿತ್ತು. ಅಂತೆಯೇ  ಕೆಲವು ದುರ್ಗಾದೇವಿ ದೇವಸ್ಥಾನಗಳ ಎದುರು ದಾಂಡಿಯಾ ನೃತ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದೇವಿಯ ವಿಗ್ರಹಕ್ಕೆ ವಿಶೇಷ ಪೂಜೆ ನೆರವೇರುತ್ತಿದ್ದಂತೆ ಕೋಲಾಟದ ಸೊಬಗು ಮೇಳೈಸಿ ಹಬ್ಬದ ಸಂಭ್ರಮ ಕಂಡುಬಂತು. ದೇವಳಿವಾಡಾದ ದುರ್ಗಾದೇವಿ ದೇವಸ್ಥಾನದ ಎದುರು ಆಯೋಜಿಸಲಾದ ದಾಂಡಿಯಾದಲ್ಲಿ ಶಾಸಕಿ ರೂಪಾಲಿ ನಾಯ್ಕ ಕೂಡ ಭಾಗಿಯಾಗಿ ಹುಮ್ಮಸ್ಸು ಹೆಚ್ಚಿಸಿದರು.

ADVERTISEMENT

ಆಯುಧ ಪೂಜೆಯ ಅಂಗವಾಗಿ ಸಾರ್ವಜನಿಕರು ತಮ್ಮ ವಾಹನಗಳು, ದೈನಂದಿನ ವೃತ್ತಿಯಲ್ಲಿ ಬಳಕೆಯಾಗುವ ಸಲಕರಣೆಗಳನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಿದರು.

ಸಾರಾಂಶ

ಕಾರವಾರ: ನಗರದಲ್ಲಿ ನವರಾತ್ರಿ ಉತ್ಸವವು ಈ ಬಾರಿ ಕಳೆಗಟ್ಟಿತು. ದೇವಿ ದೇವಸ್ಥಾನಗಳಲ್ಲಿ ಒಂಬತ್ತು ದಿನ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ವಿವಿಧ ಬಡಾವಣೆಗಳಲ್ಲಿ ದಾಂಡಿಯಾ ನೃತ್ಯಕ್ಕೆ ನಿತ್ಯವೂ ನೂರಾರು ಮಂದಿ ಹೆಜ್ಜೆ ಹಾಕಿ ಸಂಭ್ರಮಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.