ADVERTISEMENT

ಕಬ್ಬಿನ ಗದ್ದೆಗೆ ಬೆಂಕಿ: ಲಕ್ಷಾಂತರ ರೂಪಾಯಿ ಹಾನಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 11:21 IST
Last Updated 19 ಜನವರಿ 2022, 11:21 IST
ಕಬ್ಬಿನ ಗದ್ದೆಗೆ ಬೆಂಕಿ: ಲಕ್ಷಾಂತರ ರೂಪಾಯಿ ಹಾನಿ
ಕಬ್ಬಿನ ಗದ್ದೆಗೆ ಬೆಂಕಿ: ಲಕ್ಷಾಂತರ ರೂಪಾಯಿ ಹಾನಿ   

ಯಲ್ಲಾಪುರ: ತಾಲ್ಲೂಕಿನ ಕಿರವತ್ತಿ ಬಳಿಯ ಮದ್ನೂರಿನಲ್ಲಿ ಬುಧವಾರ, ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಭಸ್ಮವಾಗಿದೆ. ಸುಮಾರು ಮೂರು ಎಕರೆ ಬೆಳೆ ನಾಶವಾಗಿದೆ.

ಮದ್ನೂರಿನ ಮಂಜುನಾಥ ಶಿರನಾಲ್ಕರ್ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಅವಘಡ ನಡೆದಿದೆ. ಪಂಪ್‌ಸೆಟ್‌ಗೆ ಅಳವಡಿಸಲಾಗಿದ್ದ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕೀಟ್ ಉಂಟಾಗಿ ಬೆಂಕಿ ತಗುಲಿರಬಹುದೆಂದು ಅಂದಾಜಿಸಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ಆರಿಸಿ ಉಳಿದ ಬೆಳೆಗೂ ಹರಡದಂತೆ ತಡೆಗಟ್ಟಿದ್ದಾರೆ. ಅಗ್ನಿಶಾಮಕ ದಳದ ಠಾಣಾಧಿಕಾರಿ ಶಂಕರಪ್ಪ ಅಂಗಡಿ, ಫೈರ್ ಮೆನ್‌ ಅಮಿತ ಗುನಗಿ, ನಾಗೇಶ ದೇವಡಿಗ, ರವಿ ಹವಾಲ್ದಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT
ಸಾರಾಂಶ

ಮದ್ನೂರಿನ ಮಂಜುನಾಥ ಶಿರನಾಲ್ಕರ್ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಅವಘಡ ನಡೆದಿದೆ. ಪಂಪ್‌ಸೆಟ್‌ಗೆ ಅಳವಡಿಸಲಾಗಿದ್ದ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕೀಟ್ ಉಂಟಾಗಿ ಬೆಂಕಿ ತಗುಲಿರಬಹುದೆಂದು ಅಂದಾಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.