ಕಾರವಾರ: ತಾಲ್ಲೂಕಿನ ಜನರ ಹಲವು ದಿನಗಳ ಬೇಡಿಕೆಯಾಗಿದ್ದ ಮಡಗಾಂವ್– ಕಾರವಾರ– ಮಡಗಾಂವ್ ಜಂಕ್ಷನ್ ರೈಲು (ಸಂಖ್ಯೆ 01499/ 01500) ಸಂಚಾರವು ಅ.18ರಂದು ಪುನಃ ಆರಂಭವಾಗಲಿದೆ.
ಪ್ರತಿದಿನ ಸಂಜೆ 7.17ಕ್ಕೆ ಮಡಗಾಂವ್‌ನಿಂದ ಹೊರಡುವ ರೈಲು, ರಾತ್ರಿ 8.35ಕ್ಕೆ ಕಾರವಾರ ತಲುಪಲಿದೆ. ಅ.19ರಿಂದ ದಿನವೂ ಬೆಳಿಗ್ಗೆ 6ಕ್ಕೆ ಕಾರವಾರದಿಂದ ಹೊರಟು ಬೆಳಿಗ್ಗೆ 7.10ಕ್ಕೆ ಮಡಗಾಂವ್ ಜಂಕ್ಷನ್ ತಲುಪಲಿದೆ. ರೈಲಿಗೆ ಬಾಳ್ಳಿ, ಕಾಣಕೋಣ, ಲೋಲೆಮ್ ಮತ್ತು ಅಸ್ನೋಟಿಯಲ್ಲಿ ನಿಲುಗಡೆಯಿದೆ. ಎಂಟು ಬೋಗಿಗಳಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸದೇ ಪ್ರಯಾಣಿಸಲು ಅವಕಾಶವಿದೆ ಎಂದು ಕೊಂಕಣ ರೈಲ್ವೆ ನಿಗಮದ ಪ್ರಕಟಣೆ ತಿಳಿಸಿದೆ.
ಗೋವಾದಲ್ಲಿ ಉದ್ಯೋಗಕ್ಕಾಗಿ ಕಾರವಾರದಿಂದ ದಿನವೂ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಕೋವಿಡ್ ಕಾರಣದಿಂದ ಪ್ರಯಾಣಿಕರ ರೈಲುಗಳ ಸಂಚಾರ ರದ್ದಾದ ಬಳಿಕ ಸಾರ್ವಜನಿಕರಿಗೆ ಸಮಸ್ಯೆಯಾಗಿತ್ತು. ಸಾಂಕ್ರಾಮಿಕ ಸೋಂಕಿನ ಪ್ರಮಾಣ ಇಳಿಕೆಯಾದ ಬಳಿಕ ‘ಡೆಮು’ ರೈಲಿನ ಸಂಚಾರ ಪುನಃ ಆರಂಭಿಸುವಂತೆ ಸಾರ್ವಜನಿಕರು ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಹಾಗೂ ಸಂಸದ ಅನಂತಕುಮಾರ ಹೆಗಡೆ ಅವರಿಗೆ ನಿರಂತರ ಮನವಿ ಮಾಡುತ್ತಿದ್ದರು. ಕೊನೆಗೂ ರೈಲು ಸಂಚಾರ ಆರಂಭವಾಗಿದ್ದು ಈ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ.
ಕಾರವಾರ: ತಾಲ್ಲೂಕಿನ ಜನರ ಹಲವು ದಿನಗಳ ಬೇಡಿಕೆಯಾಗಿದ್ದ ಮಡಗಾಂವ್– ಕಾರವಾರ– ಮಡಗಾಂವ್ ಜಂಕ್ಷನ್ ರೈಲು (ಸಂಖ್ಯೆ 01499/ 01500) ಸಂಚಾರವು ಅ.18ರಂದು ಪುನಃ ಆರಂಭವಾಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.