ADVERTISEMENT

ಕಾನೂನು ಅರಿವು ಕಾರ್ಯಕ್ರಮ

ಹಿರಿಯ ನಾಗರಿಕರ ಹಕ್ಕುಗಳ ಮಾಹಿತಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 3:09 IST
Last Updated 16 ಅಕ್ಟೋಬರ್ 2021, 3:09 IST
ಗುಬ್ಬಿಯಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯದೀಶೆ ಉಂಡಿ ಮಂಜುಳ ಶಿವಪ್ಪ ಉದ್ಘಾಟಿಸಿದರು. ಶಿವರಾಜ್ ವಿ. ಸಿದ್ದೇಶ್ವರ್, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಸುರೇಶ್, ನಿವೃತ್ತಿ ನೌಕರರ ಸಂಘದ ಅಧ್ಯಕ್ಷ ರಾಮಯ್ಯ, ಗುಬ್ಬಿ ಹಿತರಕ್ಷಣಾ ಸಮಿತಿಯ ಯಲ್ಲಪ್ಪ, ಸಲೀಂ, ರಾಜಕುಮಾರ್ ಅಭಿಮಾನಿ ಸಂಘದ ವೇಣು ಗೋಪಾಲ್ ಅರಸ್ ಇದ್ದರು
ಗುಬ್ಬಿಯಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯದೀಶೆ ಉಂಡಿ ಮಂಜುಳ ಶಿವಪ್ಪ ಉದ್ಘಾಟಿಸಿದರು. ಶಿವರಾಜ್ ವಿ. ಸಿದ್ದೇಶ್ವರ್, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಸುರೇಶ್, ನಿವೃತ್ತಿ ನೌಕರರ ಸಂಘದ ಅಧ್ಯಕ್ಷ ರಾಮಯ್ಯ, ಗುಬ್ಬಿ ಹಿತರಕ್ಷಣಾ ಸಮಿತಿಯ ಯಲ್ಲಪ್ಪ, ಸಲೀಂ, ರಾಜಕುಮಾರ್ ಅಭಿಮಾನಿ ಸಂಘದ ವೇಣು ಗೋಪಾಲ್ ಅರಸ್ ಇದ್ದರು   

ಗುಬ್ಬಿ: ಹಿರಿಯ ನಾಗರಿಕರ ಸಂರಕ್ಷಣೆಗಾಗಿ ಅನೇಕ ಕಾನೂನು ಜಾರಿಯಲ್ಲಿದ್ದು, ಅವುಗಳ ಉಪಯೋಗ ಪಡೆದುಕೊಳ್ಳಿ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಹಿರಿಯ ನಾಗರಿಕರ ಹಕ್ಕುಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿರಿಯ ನಾಗರಿಕರಿಗೆ ಯಾವುದೇ ಕಚೇರಿಗಳಲ್ಲಿ, ಆಸ್ಪತ್ರೆಗಳಲ್ಲಿ ಅನ್ಯಾಯವಾಗುತ್ತಿದೆ ಎನಿಸಿದರೆ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರಕ್ಕೆ ಲಿಖಿತವಾಗಿ ತಿಳಿಸಿದರೆ ಸೂಕ್ತ ಕ್ರಮ ಕೈಗೊಂಡು ರಕ್ಷಣೆ ಒದಗಿಸಲಾಗುವುದು ಎಂದು ಹೇಳಿದರು.

ADVERTISEMENT

ಮಕ್ಕಳಿಗೆ ತಮ್ಮ ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ. ಹಿರಿಯ ನಾಗರಿಕರನ್ನು ನಿರ್ಲಕ್ಷಿಸಿದರೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನ್ಯಾಯಾಲಯದ ಪ್ಯಾನೆಲ್ ವಕೀಲರು ಸಾರ್ವಜನಿಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಹವಾಲು ಸಲ್ಲಿಸಲು ಅವಕಾಶವಿದೆ ಎಂದರು.

ಗುಬ್ಬಿ ಹಿತರಕ್ಷಣಾ ಸಮಿತಿಯ ಸಲೀಂ ಪಾಷಾ ಮಾತನಾಡಿ, ಗುರುಕುಲ ಸ್ಥಾಪಿಸಿ ವಿಶ್ವಕ್ಕೆ ಮಾದರಿಯಾಗಿದ್ದ ದೇಶದಲ್ಲಿ ಇಂದು ಅನಾಥಾಶ್ರಮಗಳು ಹೆಚ್ಚಾಗುತ್ತಿರುವುದು ವಿಷಾದಕರ. ಯುವಪೀಳಿಗೆ ಹಿರಿಯರನ್ನು ನಿರ್ಲಕ್ಷಿಸುತ್ತಿರುವುದು ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಕಾನೂನು ನೆರವು ಪಡೆಯುವ ಅಗತ್ಯವಿದೆ ಎಂದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ರಾಮಯ್ಯ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಬಗ್ಗೆಯೂ ಅರಿವು ಮೂಡಿಸಬೇಕಾದ ಅಗತ್ಯವಿದೆ. ಕಾನೂನು ಅರಿವು ಕಾರ್ಯಕ್ರಮಗಳನ್ನು ತಾಲ್ಲೂಕಿನ ಎಲ್ಲ ಹಿರಿಯ ನಾಗರಿಕರಿಗೂ ತಿಳಿಸಿ ಕೊಡುವ ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು.

ನ್ಯಾಯಾಧೀಶ ಶಿವರಾಜ್ ವಿ. ಸಿದ್ದೇಶ್ವರ್, ಅಂಚೆ ಇಲಾಖೆಯ ವೆಂಕಟೇಶ್, ಗುಬ್ಬಿ ಹಿತರಕ್ಷಣಾ ಸಮಿತಿಯ ಯಲ್ಲಪ್ಪ, ಡಾ.ರಾಜಕುಮಾರ್ ಅಭಿಮಾನಿ ಸಂಘದ ವೇಣುಗೋಪಾಲ್ ಅರಸ್, ಹಿರಿಯ ನಾಗರಿಕರಾದ ಪಾಲನೇತ್ರಯ್ಯ, ಅಪ್ಪಾಜಿ, ಮಹದೇವಯ್ಯ, ವೆಂಕಟೇಶ್, ವಕೀಲ ಸಂಘದ ಜಂಟಿ ಕಾರ್ಯದರ್ಶಿ ಸುರೇಶ್ ಇದ್ದರು.

ಸಾರಾಂಶ

ಹಿರಿಯ ನಾಗರಿಕರ ಸಂರಕ್ಷಣೆಗಾಗಿ ಅನೇಕ ಕಾನೂನು ಜಾರಿಯಲ್ಲಿದ್ದು, ಅವುಗಳ ಉಪಯೋಗ ಪಡೆದುಕೊಳ್ಳಿ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.