ADVERTISEMENT

ರೈತ ಸಂಘಟನೆ ಬಲವಾಗಬೇಕಿದೆ

ರಾಜ್ಯ ರೈತ ಸಂಘದ ಗೌರಾವಾಧ್ಯಕ್ಷ ಎಚ್. ಆರ್. ಬಸವರಾಜಪ್ಪ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 5:09 IST
Last Updated 21 ಜನವರಿ 2022, 5:09 IST
ಹೊಳೆಹೊನ್ನೂರು ಸಮೀಪದ ಹೊಳೆ ಮಡಿಕೆಚೀಲೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಾಮಫಲಕವನ್ನು ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಅನಾವರಣಗೊಳಿಸಿದರು
ಹೊಳೆಹೊನ್ನೂರು ಸಮೀಪದ ಹೊಳೆ ಮಡಿಕೆಚೀಲೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಾಮಫಲಕವನ್ನು ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಅನಾವರಣಗೊಳಿಸಿದರು   

ಹೊಳೆಹೊನ್ನೂರು: ರೈತ ಈ ದೇಶದ ಅನ್ನದಾತ ಹಾಗೂ ಮಾಲೀಕ. ರೈತರು ಯಾವತ್ತೂ ಕೊಟ್ಟ ಕುಲವೇ ಹೊರತು ಬೇಡಿದ ಕುಲವಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರಾವಾಧ್ಯಕ್ಷ ಎಚ್. ಆರ್. ಬಸವರಾಜಪ್ಪ ತಿಳಿಸಿದರು.

ಶಿವಮೊಗ್ಗ ತಾಲ್ಲೂಕಿನ ಹೊಳೆಮಡಿಕೆಚೀಲೂರಿನಲ್ಲಿ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆಯ ನಾಮಫಲಕ ಅನಾವರಣ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

1960ರಲ್ಲಿ ವಿದೇಶಗಳಿಂದ ಗೋಧಿ, ಅಕ್ಕಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ನಂತರ ಸರ್ಕಾರವೇ ರೈತರ ಮನೆ ಬಾಗಿಲಿಗೆ ಬಂದು ಬ್ಯಾಂಕ್‌ಗಳ ಮುಖಾಂತರ ಸಾಲ ಹಾಗೂ ಕೃಷಿ ಚಟುವಟಿಕೆಗೆ ರಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ನೀಡಿ, ಇಂದು ರೈತರನ್ನು ಸಾಲಗಾರರು ಎಂಬ ಹಣೆಪಟ್ಟಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಈಗಾಗಲೇ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ನಂತರ ಅದನ್ನು ವಾಪಸ್‌ ಪಡೆಯುವ ಮೂಲಕ ರೈತರ ಮಹತ್ವವನ್ನು ತಿಳಿಸಿದೆ. ಅಲ್ಲದೇ ಸಂಘಟನೆಯೂ ಬಲಿಷ್ಠವಾದಲ್ಲಿ ಯಾವ ಸರ್ಕಾರ ಬಂದರೂ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಮಹಿಳೆಯರನ್ನು ಸಂಘಟನೆಯಲ್ಲಿ ತೊಡಗಿಸಿಕೊಳ್ಳವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

‘ನನಗೆ ಅಧಿಕಾರದ ಆಸೆಯಿಲ್ಲ. ಬಿ.ಎಸ್‌. ಯಡಿಯೂರಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಮನೆಗೆ ಬಂದು ನಮ್ಮ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ಆದರೆ ನನಗೆ ಆಸಕ್ತಿ ಇರಲಿಲ್ಲ. ಸಂಘಟನೆಯನ್ನು ಬಿಟ್ಟು ಹೋಗುವ ಮನಸ್ಸು ಇಲ್ಲ’ ಎಂದರು.

‘ಈಗಾಗಲೇ ಗ್ರಾಮ ಪಂಚಾಯಿತಿಗಳಿಂದ ಕಸ ವಿಲೇವಾರಿ ಮಾಡಲು ತಿಂಗಳಿಗೆ ₹ 50 ವಸೂಲಿ ಮಾಡಲಾಗುತ್ತಿದೆ. ಕುಡಿಯುವ ನೀರಿಗೆ ಮೀಟರ್ ಅಳವಡಿಸಿ ದರ ಹೆಚ್ಚಿಸಲಾಗುತ್ತದೆ’ ಎಂದು ಆರೋಪಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಕೆ. ರಾಘವೇಂದ್ರ, ತಾಲ್ಲೂಕು ಅಧ್ಯಕ್ಷ ಯಲವಟ್ಟಿ ಚಂದ್ರಪ್ಪ, ಗ್ರಾಮಾಂತರ ಅಧ್ಯಕ್ಷ ರುದ್ರೇಶ್, ಭದ್ರಾವತಿ ತಾಲ್ಲೂಕು ಅಧ್ಯಕ್ಷ ಜಿ.ಎನ್. ಪಂಚಾಕ್ಷರಪ್ಪ, ಶೇಖರಪ್ಪ, ಶಿವಯ್ಯ, ಪಿ.ಈ. ಚಂದ್ರಪ್ಪ, ಜ್ಞಾನೇಶ್, ರಮೇಶಪ್ಪ, ಶೇಖರಪ್ಪ, ಎಂ.ಜಿ. ಶೇಖರಪ್ಪ, ಇಂದಿರಾ ಶೇಖರಪ್ಪ, ಎಂ.ಜಿ. ರವಿ, ಮಲ್ಲೇಶಪ್ಪ ಬಿ. ಇದ್ದರು.

ಸಾರಾಂಶ

ಹೊಳೆಹೊನ್ನೂರು: ರೈತ ಈ ದೇಶದ ಅನ್ನದಾತ ಹಾಗೂ ಮಾಲೀಕ. ರೈತರು ಯಾವತ್ತೂ ಕೊಟ್ಟ ಕುಲವೇ ಹೊರತು ಬೇಡಿದ ಕುಲವಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರಾವಾಧ್ಯಕ್ಷ ಎಚ್. ಆರ್. ಬಸವರಾಜಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.