ADVERTISEMENT

ಅಸ್ಪೃಶ್ಯತಾ ನಿವಾರಣೆ ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 4:23 IST
Last Updated 16 ಜನವರಿ 2022, 4:23 IST
ಹೊಂಗನೂರು ಗ್ರಾಮದಲ್ಲಿ ನಡೆದ ವಿಚಾರ ಗೋಷ್ಠಿ, ಬೀದಿನಾಟಕ ಹಾಗೂ ಅಸ್ಪೃಶ್ಯತಾ ನಿವಾರಣೆ ಅರಿವು ಕಾರ್ಯಕ್ರಮದಲ್ಲಿ ಕಲಾವಿದರು ಜಾಗೃತಿ ಗೀತೆ ಹಾಡಿದರು
ಹೊಂಗನೂರು ಗ್ರಾಮದಲ್ಲಿ ನಡೆದ ವಿಚಾರ ಗೋಷ್ಠಿ, ಬೀದಿನಾಟಕ ಹಾಗೂ ಅಸ್ಪೃಶ್ಯತಾ ನಿವಾರಣೆ ಅರಿವು ಕಾರ್ಯಕ್ರಮದಲ್ಲಿ ಕಲಾವಿದರು ಜಾಗೃತಿ ಗೀತೆ ಹಾಡಿದರು   

ಚನ್ನಪಟ್ಟಣ: ‘ಅಸ್ಪೃಶ್ಯತೆ ನಿರ್ಮೂಲನೆಯಾಗದ ಹೊರತು ಭಾರತ ವಿಶ್ವಗುರು ಆಗಲಾರದು’ ಎಂದು ಉಪನ್ಯಾಸಕ ರವಿಕುಮಾರ್ ಕೂಡ್ಲೂರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಪ್ರಜ್ಞಾ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಹೋಬಳಿಮಟ್ಟದ ವಿಚಾರ ಗೋಷ್ಠಿ, ಬೀದಿನಾಟಕ ಹಾಗೂ ಅಸ್ಪೃಶ್ಯತಾ ನಿವಾರಣೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಪಂಚದ ಯಾವುದೇ ದೇಶಗಳಲ್ಲಿ ಇಲ್ಲದ ಅಮಾನವೀಯ ಆಚರಣೆಗಳು ಭಾರತದಂತಹ ಮಹಾನ್ ದೇಶದಲ್ಲಿ ರೂಢಿಯಲ್ಲಿವೆ. ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಆರಂಭವಾದ ಅಸ್ಪೃಶ್ಯತಾ ಆಚರಣೆ ಇಂದಿಗೂ ಹಲವು ಕಡೆ ಜೀವಂತವಾಗಿರುವುದು ದೇಶದ ದುರಂತಕ್ಕೆ ಸಾಕ್ಷಿ ಎಂದರು.

ADVERTISEMENT

21ನೇ ಶತಮಾನದಲ್ಲಿ ಭಾರತ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ವಿಶ್ವದ ಬೇರೆ ದೇಶಗಳನ್ನು ತನ್ನತ್ತ ನೋಡುವಂತೆ ಮಾಡಿದೆ. ಆದರೂ, ಅಸ್ಪೃಶ್ಯತೆಯಂತಹ ಅನಿಷ್ಟ ಆಚರಣೆ ಮಾಡುವ ಮೂಲಕ ವಿಶ್ವದ ಮುಂದೆ ಭಾರತ ತಲೆತಗ್ಗಿಸುವಂತೆ ಆಗಿದೆ ಎಂದು ವಿಷಾದಿಸಿದರು.

ವಕೀಲ ಗಂಗಾಧರ್, ಅಧ್ಯಕ್ಷತೆವಹಿಸಿದ್ದ ಹೊಂಗನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಅನಂತಕೃಷ್ಣ ಅರಸ್ ಮಾತನಾಡಿದರು. ಹೊಂಗನೂರು ಗ್ರಾ.ಪಂ. ಅಧ್ಯಕ್ಷೆ ರೇಖಾ ಅರಸ್, ತಾ.ಪಂ. ಮಾಜಿ ಸದಸ್ಯ ಹನುಮಂತಯ್ಯ, ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಜಯಸಿಂಹ, ಕಲಾವಿದರಾದ ನೀಲಸಂದ್ರ ಸಿದ್ದರಾಮು, ಸರ್ವೋತ್ತಮ್, ಉಪನ್ಯಾಸಕ ಬಿ.ಪಿ. ಸುರೇಶ್ ಹಾಜರಿದ್ದರು.

ರಾಮನಗರದ ಜೀವೋದಯ ಕಲಾ ತಂಡವು ಜಾಗೃತಿ ನಾಟಕ ಪ್ರದರ್ಶಿಸಿತು. ಕಲಾವಿದರು ಜಾಗೃತಿ ಗೀತೆಗಳನ್ನು ಹಾಡಿದರು.

ಸಾರಾಂಶ

‘ಅಸ್ಪೃಶ್ಯತೆ ನಿರ್ಮೂಲನೆಯಾಗದ ಹೊರತು ಭಾರತ ವಿಶ್ವಗುರು ಆಗಲಾರದು’ ಎಂದು ಉಪನ್ಯಾಸಕ ರವಿಕುಮಾರ್ ಕೂಡ್ಲೂರು ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.