ADVERTISEMENT

ಬಾಲಕಾರ್ಮಿಕ ಪದ್ಧತಿ ತಡೆಗೆ ಅಗತ್ಯ ಕ್ರಮ: ಆರ್‌. ದಿನೇಶ್‌

ಮಕ್ಕಳ ಹಕ್ಕು ರಕ್ಷಣೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 5:45 IST
Last Updated 10 ಅಕ್ಟೋಬರ್ 2021, 5:45 IST
ಮಾಗಡಿ ತಾಲ್ಲೂಕಿನ ಅಜ್ಜನಹಳ್ಳಿ ಡಾನ್‌ಬಾಸ್ಕೋ ಯುವ ಗ್ರಾಮದಲ್ಲಿ ಶನಿವಾರ ನಡೆದ ಮಕ್ಕಳ ಹಕ್ಕುಗಳ ಕಾರ್ಯಾಗಾರದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ದಿನೇಶ್‌ ಮಾತನಾಡಿದರು. ಬಿಆರ್‌ಸಿ ಸಮನ್ವಯಾಧಿಕಾರಿ ರಾಘವೀನಾಯಕ್‌, ಡಾನ್‌ ಬಾಸ್ಕೋ ಸಂಸ್ಥೆಯ ರೆಕ್ಟರ್‌ ನಿರ್ದೇಶಕ ಮರಿನಾ ಜೂಲಿಯನ್‌ ಫಾದರ್‌, ಅಶೋಕ್‌, ಸಿಡಿ‍ಪಿಒ ಸುರೇಂದ್ರ ಹಾಜರಿದ್ದರು
ಮಾಗಡಿ ತಾಲ್ಲೂಕಿನ ಅಜ್ಜನಹಳ್ಳಿ ಡಾನ್‌ಬಾಸ್ಕೋ ಯುವ ಗ್ರಾಮದಲ್ಲಿ ಶನಿವಾರ ನಡೆದ ಮಕ್ಕಳ ಹಕ್ಕುಗಳ ಕಾರ್ಯಾಗಾರದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ದಿನೇಶ್‌ ಮಾತನಾಡಿದರು. ಬಿಆರ್‌ಸಿ ಸಮನ್ವಯಾಧಿಕಾರಿ ರಾಘವೀನಾಯಕ್‌, ಡಾನ್‌ ಬಾಸ್ಕೋ ಸಂಸ್ಥೆಯ ರೆಕ್ಟರ್‌ ನಿರ್ದೇಶಕ ಮರಿನಾ ಜೂಲಿಯನ್‌ ಫಾದರ್‌, ಅಶೋಕ್‌, ಸಿಡಿ‍ಪಿಒ ಸುರೇಂದ್ರ ಹಾಜರಿದ್ದರು   

ಮಾಗಡಿ: ‘ಬಾಲಕಾರ್ಮಿಕ ಪದ್ಧತಿ ತಡೆ ಸಂಬಂಧ ಜಿಲ್ಲೆಯಲ್ಲಿ ಬಾಲಕಾರ್ಮಿಕರ ಸಮೀಕ್ಷೆ ಮಾಡಲಾಗುವುದು’ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ದಿನೇಶ್‌ ಆರ್‌. ತಿಳಿಸಿದರು.

ತಾಲ್ಲೂಕಿನ ಅಜ್ಜನಹಳ್ಳಿ ಡಾನ್‌ ಬಾಸ್ಕೋ ಯುವ ಮಾರ್ಗ ಕ್ರೀಮ್‌ ಯೋಜನೆ ಆವರಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶನಿವಾರ ಮಕ್ಕಳ ಹಕ್ಕುಗಳ ಕುರಿತು ಶಿಕ್ಷಕರು ಮತ್ತು ಮಕ್ಕಳಿಗೆ ನಡೆದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಾಲಕಾರ್ಮಿಕ ಪದ್ಧತಿ ಸಾಮಾಜಿಕ ಪಿಡುಗಾಗಿದೆ. ಯಾವುದೇ ಮಗು ಶಾಲೆಯಿಂದ ಹೊರಗುಳಿದು ಬಾಲಕಾರ್ಮಿಕರಾಗಿ ದುಡಿಯಲು ಹೋಗದಂತೆ ತಡೆಗಟ್ಟಲು ಇಲಾಖೆ ಶ್ರಮಿಸುತ್ತಿದೆ. ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಕಂಡುಬಂದರೆ 1098ಕ್ಕೆ ಕರೆ ಮಾಡಿ ತಿಳಿಸಬೇಕು ಎಂದರು.

ADVERTISEMENT

ಡಾನ್‌ ಬಾಸ್ಕೋ ಸಂಸ್ಥೆಯ ರೆಕ್ಟರ್‌ ನಿರ್ದೇಶಕ ಮರಿನಾ ಜೂಲಿಯನ್‌ ಫಾದರ್‌ ಮಾತನಾಡಿ, ಸಂಸ್ಥೆಯು 2012ರಿಂದ ಇಲ್ಲಿಯ ತನಕ ಜೆಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಪರವಾಗಿ ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಮಕ್ಕಳ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸ ಹೊಂದುವ ಹಕ್ಕು, ಭಾಗವಹಿಸುವ ಹಕ್ಕುಗಳು ಸಿಗುವಂತೆ ಮಾಡಲು ವಿವಿಧ ಕಾರ್ಯಕ್ರಮ ಮತ್ತು ಯೋಜನೆ ರೂಪಿಸಿದೆ ಎಂದು ತಿಳಿಸಿದರು.

ಸಿಡಿಪಿಒ ಸುರೇಂದ್ರ ಮಾತನಾಡಿ, ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಮಗುವಿನ ಹಕ್ಕು ಪೂರಕವಾಗಿದೆ. ರಾಜ್ಯದಲ್ಲಿ ಸಂಕಟಕ್ಕೆ ಸಿಲುಕಿದ ಮಕ್ಕಳಿಗೆ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲನ್ಯಾಯ ಮಂಡಳಿ ಮಕ್ಕಳ ಹಕ್ಕುಗಳ ಪರವಾಗಿ ಸಮಗ್ರ ಯೋಜನೆ ರೂಪಿಸಿ ರಕ್ಷಣೆ ಮಾಡುತ್ತಿವೆ. ಡಾನ್‌ ಬಾಸ್ಕೋ ಸಂಸ್ಥೆ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಕನಂತೆ ಕರ್ತವ್ಯ ನಿರ್ವಹಿಸುತ್ತಿರುವುದು ಸಂತೋಷದ ವಿಷಯ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ರಾಘವೀನಾಯಕ್‌, ಶಾಲಾಭಿವೃದ್ಧಿ ಸಮನ್ವಯ ಸಮಿತಿ ಅಧ್ಯಕ್ಷ ಅಶೋಕ್‌, ಡಾನ್‌ ಬಾಸ್ಕೋ ಸಂಸ್ಥೆಯ ನಿರ್ದೇಶಕ ಸಜಿ ಜಾರ್ಜ್‌ ಮಾತನಾಡಿದರು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಸಿಬ್ಬಂದಿ ಹಾಜರಿದ್ದರು.

ಸಾರಾಂಶ

‘ಬಾಲಕಾರ್ಮಿಕ ಪದ್ಧತಿ ತಡೆ ಸಂಬಂಧ ಜಿಲ್ಲೆಯಲ್ಲಿ ಬಾಲಕಾರ್ಮಿಕರ ಸಮೀಕ್ಷೆ ಮಾಡಲಾಗುವುದು’ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ದಿನೇಶ್‌ ಆರ್‌. ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.